ಜ.5 ರಂದು ಸುಳ್ಯ ಅನ್ಸಾರಿಯಾ ಅಡಿಟೋರಿಯಂನಲ್ಲಿ ಕಾರ್ಯಕ್ರಮ
ಕೆ.ಎ 21ಸುಳ್ಯ ವಾಟ್ಸಪ್ ಗ್ರೂಪ್ ವತಿಯಿಂದ ಶಿಕ್ಷಣ ಸಬಲೀಕರಣಗೊಳಿಸಿ ಸಮುದಾಯದ ನಿರ್ಮಾಣ,ನಾಯಕತ್ವಕ್ಕೆ ಪ್ರೇರಣೆ,ಜೀವನ ಪರಿವರ್ತನೆ ಎಂಬ ವಿಷಯಾಧಾರಿತ ಮಾಹಿತಿ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮ ಜ.5 ರಂದು ಅನ್ಸಾರಿಯಾ ಗಲ್ಪ್ ಅಡಿಟೋರಿಯಂ ನಲ್ಲಿ ನಡೆಯಲಿದೆ.
ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ತರಬೇತುದಾರರಾಗಿ ಯೆನೆಪೋಯ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ಬಹರೈನ್&ಕತರ್ ಇದರ ನಿರ್ದೇಶಕ ಸಿನಾನ್ ಝಕರಿಯ ಅಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ವಾಟ್ಸಪ್ ಗ್ರೂಪ್ ಸದಸ್ಯರು ತಿಳಿಸಿದ್ದಾರೆ