ಮುಕ್ಕೂರು : ಶತಮಾನದ ಹೊಸ್ತಿಲಿನಲ್ಲಿರುವ ಮುಕ್ಕೂರು ಸ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಪುನರಚನೆ ಸಭೆಯು ಸಂಘದ ಅಧ್ಯಕ್ಷರಾದ ಸುಧಾಕರ ರೈ ಕುಂಜಾಡಿ ಅವರ ಅಧ್ಯಕ್ಷತೆಯಲ್ಲಿ ಜ.1 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಗೌರವಾಧ್ಯಕ್ಷರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ನೂತನ ಅಧ್ಯಕ್ಷರಾಗಿ ಜಗನ್ನಾಥ ಪೂಜಾರಿ ಮುಕ್ಕೂರು, ಕಾರ್ಯದರ್ಶಿಯಾಗಿ ಕಿರಣ್ ಪ್ರಸಾದ್ ಕೆ, ಕೋಶಾಧಿಕಾರಿಯಾಗಿ ಜೈನುದ್ದೀನ್ ತೋಟದಮೂಲೆ, ಉಪಾಧ್ಯಕ್ಷರಾಗಿ ವಿಕಾಸ್ ರೈ ಕುಂಜಾಡಿ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಅಡ್ಯತಕಂಡ ಅವರು ಆಯ್ಕೆಗೊಂಡರು.
ಕಾರ್ಯಾಕಾರಿಣಿ ಸದಸ್ಯರಾಗಿ ಡಾ.ನರಸಿಂಹ ಶರ್ಮಾ ಕಾನಾವು, ಗಣಪತಿ ಭಟ್ ನೀರ್ಕಜೆ, ಉಮೇಶ್ ಕೆಎಂಬಿ, ಮಲ್ಲಿಕಾ ಶೆಟ್ಟಿ ಕುಂಜಾಡಿ, ಸತ್ಯ ಪ್ರಸಾದ್ ಕಂಡಿಪ್ಪಾಡಿ, ಲೋಕೇಶ್ ಬೀರುಸಾಗು, ಸುಮತಿ ರೈ ಕೊಂಡೆಪ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ, ಮುಖ್ಯಗುರು ಲತಾ ಉಪಸ್ಥಿತರಿದ್ದರು. ಪ್ರಮುಖರಾದ ಕುಂಬ್ರ ದಯಾಕರ ಆಳ್ವ, ಗಣೇಶ ಶೆಟ್ಟಿ ಕುಂಜಾಡಿ, ನರಸಿಂಹ ತೇಜಸ್ವಿ ವಿವಿಧ ಸಲಹೆ ಸೂಚನೆ ನೀಡಿದರು. ನಿರ್ಗಮನ ಕಾರ್ಯದರ್ಶಿ ನಾರಾಯಣ ಕೊಂಡೆಪ್ಪಾಡಿ ನಿರೂಪಿಸಿದರು.