ಕಂದ್ರಪ್ಪಾಡಿ ಕುಟುಂಬದ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಜ.4 ಹಾಗು 5ರಂದು ಕಂದ್ರಪ್ಪಾಡಿ ರುದ್ರಚಾಮುಂಡಿ ಆದಿಮನೆಯಲ್ಲಿ ನಡೆಯಿತು.
ಜ 4ರಂದು ಬೆಳಿಗ್ಗೆ ಹರಿಸೇವೆ,ಮುಡಿಪು ಕಟ್ಟುವುದು ಪ್ರಸಾದ ವಿತರಣೆ ಅನ್ನಸಂತರ್ಪಣೆ,ಸಂಜೆ ಕೆಂಚರಾಯನ ಪೂಜೆ,ರಾತ್ರಿ ಭಂಡಾರ ತೆಗೆದು ಗುರುಕಾರ್ನೂರು,ಸತ್ಯದೇವತೆ ಕಲ್ಲುರ್ಟಿ ಜೋಡು ಕುಪ್ಪೆ ಪಂಜುರ್ಲಿ ವರ್ಣಾರ ಪಂಜುರ್ಲಿ ದೈವಗಳ ನೇಮ ನಡೆಯಿತು.
ಜ. 5ರಂದು ಪ್ರಾತಃ ಕಾಲದಿಂದ ರಾಜಪಟ್ಟ ಪರಿವಾರ ದೈವಗಳಾದ ಗಂಗನಾಡ ರಕ್ತೇಶ್ವರಿ, ಪಾಲೇಶ್ವರಾಯ, ಪೊಟ್ಟ ಪಂಜುರ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ ದೈವಗಳ ನೇಮೊತ್ಸವ ನಡೆದು ಪ್ರಸಾದ ವಿತರಣೆ ಅನ್ನಸಂತರ್ಪಣೆ ನೆರವೇರಿತು. ಸಂಜೆ ಗುಳಿಗ ದೈವದ ನೇಮ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಪರಮೇಶ್ವರ ಗೌಡ ಬೊಮ್ಮದೇರೆ ಪೈಕ,ಆದಿಮನೆಯ ಮುಖ್ಯಸ್ಥರಾದ ಕುಶಾಲಪ್ಪ ಗೌಡ,ಶ್ರೀ ನಾಗಪ್ಪ ಗೌಡ ಬೊಮ್ಮದೇರೆ ಪೈಕ,ಶೇಷಪ್ಪಗೌಡ ದೊಡ್ಡಕಜೆ, ದರ್ಮಪಾಲ ಗೌಡ ಕರಂಗಲ್ಲು,ಮೋಹನ ಗೌಡ ರುದ್ರಚಾಮುಂಡಿ ಹೊಸೋಳಿ, ಕುಂಞಣ್ಣ ಗೌಡ ಪೊಳಾಜೆ ಮಿತ್ತೋಡಿ,ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಯ ಸದಸ್ಯರು ಕುಟುಂಬಸ್ಥರು ಬಂದುಗಳು ಊರವರು ಉಪಸ್ಥಿತರಿದ್ದರು
✍️ ಕುಶಾಲಪ್ಪ ಕಾಂತುಕುಮೇರಿ