ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಜಯಕುಮಾರ್ ಇವರಿಗೆ ವಯೋನಿವೃತ್ತಿ ಪ್ರಯುಕ್ತ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ 20 ಅಂಶಗಳ ಸಭೆಯಲ್ಲಿ ನೇರವೇರಿಸಲಾಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರಘ ಎಸ್ ಎಂ ಗೌರವಿಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಚಂದ್ರಪ್ರಕಾಶ್ ಕಂಬಳ, ಸುಳ್ಯ ವಲಯ ಮೇಲ್ವಿಚಾರಕರು ಹಾಗೂ ಸುಳ್ಯ ತಾಲೂಕಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.