ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜ.17 ರಂದು ಚುನಾವಣೆ ನಡೆಯಲಿದ್ದು ಇಂದು 4 ಮಂದಿ ನಾಮಪತ್ರ ಸಲ್ಲಿಕೆ ಮಾಡಿರುತ್ತಾರೆ.
ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕರುಣಾಕರ ಹಾಸ್ಪಾರೆ, ಪ.ಜಾತಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮದಾಸ ಮೊರಂಗಲ್ಲು, ಹಿಂದುಳಿದ ವರ್ಗ ಎ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಾಧರ ಬಿ.ಕೆ ಬಡ್ಡಡ್ಕ, ಹಿಂದುಳಿದ ವರ್ಗ ಬಿ’ ಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಾಧರ ಎನ್.ಎ.ನೆಡ್ಚಿಲು ರವರು ನಾಮಪತ್ರ ಸಲ್ಲಿಸಿದ್ದಾರೆ.
ಜ.9 ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಈಗಾಗಲೇ ಒಟ್ಟು 13 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.