ಹರ್ಷಕುಮಾರ್ ಸಹಿತ ಮೂವರ ನಾಮಪತ್ರ
ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಜ. 19 ರಂದು ಚುನಾವಣೆ ನಡೆಯಲಿದ್ದು, ಜ.7 ರಂದು ನಿಕಟ ಪೂರ್ವ ಅಧ್ಯಕ್ಷ ಹರ್ಷಕುಮಾರ್ ದೇವಜನ ಸಹಿತ ಮೂವರು ನಾಮಪತ್ರ ಸಲ್ಲಿಸಿದ್ದಾರೆ.
ಸಾಮಾನ್ಯ ಕ್ಷೇತ್ರಕ್ಕೆ ಸಹಕಾರಿ ಅಭಿವೃದ್ಧಿ ಬಳಗದಿಂದ ಹರ್ಷಕುಮಾರ್ ದೇವಜನ, ಸಹಕಾರ ಭಾರತಿಯಿಂದ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕೆ.ಸಿ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗ ಎ ಗೆ ಗೋಪಾಲಕೃಷ್ಣ ಅವರು ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.