ಭಾರತ್ ಶಾಮಿಯಾನಕ್ಕೆ ರಜತ ಸಂಭ್ರಮ

0

ಸಾಂದೀಪ್ ಶಾಲೆಯ ಮಕ್ಕಳ ಜೊತೆ ರಜತ ಮಹೋತ್ಸವ ಆಚರಿಸಿದ ಭಾರತ್ ಶಾಮಿಯಾನ

ಸುಳ್ಯ ಭಾರತ್ ಶಾಮಿಯಾನಕ್ಕೆ ಇಪ್ಪತೈದು ವರ್ಷಗಳ ತುಂಬಿದ ಸುಸಂದರ್ಭವನ್ನು ಸುಳ್ಯ ಎಂ ಬಿ ಫೌಂಡೇಶನ್‌ ನ ಸಾಂದೀಪ್ ವಿಶೇಷ ಮಕ್ಕಳಶಾಲೆಯ ಮಕ್ಕಳ ಜೊತೆ ಆಚರಿಸುವ ಮೂಲಕ ಇಪ್ಪತ್ತೈದನೇ ವಾರ್ಷಿಕೋತ್ಸವವನ್ನು ಆಚರಿಸಿದರು. ಕಾರ್ಯಕ್ರಮ ಸಾಂದೀಪ್ ಶಾಲೆಯ ಮಕ್ಕಳು ಕೇಕ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಕ್ಕಳಿಗೆ ಪುಸ್ತಕ ಹಾಗೂ ಸಿಹಿತಿಂಡಿ ವಿತರಿಸಿದರು.
ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ರವರು ಭಾರತ್ ಶಾಮಿಯಾನ ಮಾಲಕ ಸಂಶುದ್ದೀನ್ ರವರು ಸ್ವಾಗತಿಸಿ ಶುಭ ಹಾರೈಸಿದರು.


ಉದ್ಯಮಿ ಅನ್ವರ್ ಪಂಜಿಕಲ್ಲು ,ಸಾಂದೀಪ್ ಶಾಲೆಯ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂದೀಪ್ ಶಾಲೆ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ಸಂಯೋಜನೆ ಮಾಡಿದರು