ಸುಳ್ಯದಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ನಿವೃತ್ತಿ ಹೊಂದಿದ ಡಾ. ನಂದಕುಮಾರ್ ರವರು ಕೆವಿಜಿ ವೈದ್ಯಕೀಯ ಕಾಲೇಜಿನ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕರೂ, ಎ.ಒ.ಎಲ್.ಇ ಅಧ್ಯಕ್ಷರೂ ಆಗಿರುವ ಡಾ. ಕೆ.ವಿ. ಚಿದಾನಂದ ಹೂಗುಚ್ಚ ನೀಡಿ ಸ್ವಾಗತಿಸಿದರು. ಎ.ಒ.ಎಲ್.ಇ. ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿ ಕೆ.ವಿ. ಹೇಮನಾಥ್, ನಿರ್ದೇಶಕರುಗಳಾದ ಜಗದೀಶ್ ಎ.ಹೆಚ್ ಅಡ್ತಲೆ, ಧನಂಜಯ ಮದುವೆಗದ್ದೆ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ನೆಹರು ಮೆಮೊರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೆರಾಲ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲೆ ಪ್ರೇಮ ಬಿ.ಎಂ, ವೈದ್ಯಕೀಯ ಅಧೀಕ್ಷಕ ಡಾ. ಸಿ. ರಾಮಚಂದ್ರ ಭಟ್, ಡಾ. ಸುಬ್ರಹ್ಮಣ್ಯ, ಡಾ. ಗೀತಾ ದೊಪ್ಪ, ಡಾ. ನವ್ಯ ಬಿ.ಎನ್, ಡಾ. ಸನತ್, ಡಾ. ವೇಣುಗೋಪಾಲ, ಡಾ. ಅವಿನಾಶ್ ಸೇರಿದಂತೆ ಕೆವಿಜಿ ಗ್ರೂಪ್‌ನ ಪ್ರಾಂಶುಪಾಲರು, ಆಡಳಿತಗಾರರು ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.