
ಬೆಳ್ಳಾರೆಯ ಶ್ರೀ ಜಲದುರ್ಗಾದೇವೀ ಪ್ರಸನ್ನ ಅರ್ಥ್ ಮೂವರ್ಸ್ , ಟ್ರಾನ್ಸ್ ಪೋರ್ಟ್ ಮತ್ತು ಬೋರ್ ವೆಲ್ಸ್ ಮಾಲಕ ಪದ್ಮನಾಭ ಬೀಡು ದೊಡ್ಡಮನೆಯವರ ಮನೆಯಲ್ಲಿ ಎ.3 ರಂದು ರಾತ್ರಿ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಲೀಲಾವತಿ ಬೀಡು ದೊಡ್ಡಮನೆ ಹಾಗೂ ಮನೆಯವರು ಹಾಗೂ ಕುಟುಂಬಸ್ಥರು ಮತ್ತು ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ಬೆಳಿಗ್ಗೆ ನೂತನವಾಗಿ ನಿರ್ಮಿಸಿದ ” ಶಿವಕೃಪಾ “ನಿಲಯದ ಗೃಹಪ್ರವೇಶವು ಬ್ರಹ್ಮಶ್ರೀ ವೇ.ಮೂ.ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಗಣಪತಿ ಹವನ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.