ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಕಿರುಷಷ್ಟಿ ಮಹೋತ್ಸವದ ಅಂಗವಾಗಿ ಜ.5 ರಂದು ಸಾವಿರಾರು ಭಕ್ತರು ಆಗಮಿಸಿ ದೇವಳದ ಒಳಾಂಗಣ ಹೊರಾಂಗಣ ಹಾಗೂ ಕ್ಷೇತ್ರದ ಎಲ್ಲಾ ಕಡೆಗಳಲ್ಲಿಯೂ ಭಕ್ತ ಸಂದಣಿ ಹಾಗೂ ವಾಹನ ಸಂದಣಿ ಕಂಡು ಬಂತು.
ಕಿರು ಷಷ್ಟಿಯಲ್ಲಿ ದೂರದೂರುಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪ್ರಸಾದ ಹಾಗೂ ಅನ್ನಪ್ರಸಾದವನ್ನು ಪಡೆದು ಸಂತೃಪ್ತಿಗೊಳ್ಳುತ್ತಾರೆ ಶ್ರೀ ದೇವಳದ ಕಡೆಯಿಂದ ಭಕ್ತರಿಗೆ ತೊಂದರೆ ಆಗದ ಹಾಗೆ ಅನುಕೂಲಕರ ರೀತಿಯಲ್ಲಿ ದೇವರ ದರ್ಶನ, ದೇವರ ಪ್ರಸಾದ, ಹಾಗೂ ಭೋಜನ ಪ್ರಸಾದಕ್ಕೆ ವ್ಯವಸ್ಥೆಯನ್ನು ಕೈಗೊಂಡಿದ್ದರು. ಆದಿ ಸುಬ್ರಹ್ಮಣ್ಯದಲ್ಲಿಯೂ ಕೂಡ ಭಕ್ತಸಂದಣಿ ಕಂಡುಬಂತು. ಕ್ಷೇತ್ರದ ಎಲ್ಲಾ ವಸತಿ ಗೃಹಗಳು ತುಂಬಿದ್ದವು.