ಸುಳ್ಯ ಸೈಂಟ್ ಬ್ರಿಜಿಡ್ಸ್ ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ನವೀನ್ ಚಾತುಬಾಯಿ ಆಯ್ಕೆ

0

ಸುಳ್ಯ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪೋಷಕರ ಸಮಿತಿಯ ಅಧ್ಯಕ್ಷರಾಗಿ ಐವರ್ನಾಡಿನ ಸಿ. ಕೆ.ನವೀನ್ ಚಾತುಬಾಯಿಯವರು ಆಯ್ಕೆಯಾಗಿದ್ದಾರೆ. 



ಶಾಲಾ ಸಂಚಾಲಕರಾದ ರೆ.ಪಾ. ವಿಕ್ಟರ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಪೋಷಕರ ಸಮಿತಿಯ ಆಯ್ಕೆ ನಡೆಯಿತು. ಶಾಲಾ ಪ್ರತಿ ತರಗತಿಯ ಎರಡು ಪೋಷಕರು ಸಮಿತಿಯಲ್ಲಿ ಪ್ರತಿನಿಧಿಯಾಗಿ ಆಯ್ಕೆಯಾಗಿರುವರು. ಒಟ್ಟು 20ಸದಸ್ಯರು ಈ ಪೋಷಕ ಸಮಿತಿಯಲ್ಲಿರುವರು.