ಬೆಳ್ಳಾರೆಯಲ್ಲಿ ಸ್ನೇಹಿತರ ಕಲಾ ಸಂಘದ ಆಶ್ರಯದಲ್ಲಿ ಮೊಸರು ಕುಡಿಕೆ ಶೋಭಾಯತ್ರೆ

0

ಅಟ್ಟಿ ಮಡಿಕೆ ಒಡೆಯುವುದರಲ್ಲಿ ಶ್ರೀ ಶಾಸ್ತಾವು ರೆಂಜಾಳ ಪ್ರಥಮ

ನಾಳೆಯೂ ನಡೆಯಲಿದೆ ವಿವಿಧ ಕ್ರೀಡಾ ಸ್ಪರ್ಧೆಗಳು

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 26ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಆ. 31 ಸಂಜೆ ಚಾಲನೆ ದೊರೆಯಿತು.

ಆ 31ರಂದು ಸಂಜೆ ಅಟ್ಟಿ ಮಡಿಕೆ ಮೊಸರು ಕುಡಿಕೆ ಶೋಭಾಯಾತ್ರೆಗೆ
ಬೆಳ್ಳಾರೆ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿ ಉದ್ಯಮಿ ಮಿಥುನ್ ಶೆಣೈ ಚಾಲನೆ ನೀಡಿದರು.

ವಿಶೇಷ ಆಕರ್ಷಣೆಯಾಗಿ ಸ್ನೇಹಾಂಜಲಿ ಕುಣಿತ ಭಜನಾ ತಂಡ ಬೆಳ್ಳಾರೆ ಕುಣಿತ ಭಜನೆಯೊಂದಿಗೆ ಮೆರವಣಿಗೆ ನಡೆಯಿತು. ಸಂಜೆ ಬೆಳ್ಳಾರೆ ದೇವಿ ಹೈಟ್ಸ್ ಬಳಿ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡುರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ, ಚೊಕ್ಕಾಡಿ ಗರುಡ ಯುವಕ ಮಂಡಲದ ಅಧ್ಯಕ್ಷ ಯತಿನ್‌‌ ಕೊಳಂಬೆ, ಅಡ್ಕಾರು ಟೀಂಸ್ಕಂದ ಇದರ ಅಧ್ಯಕ್ಷ ತೀಕ್ಷಣ್ ಅತಿಥಿಗಳಾಗಿ ಭಾಗವಹಿಸಿದ್ದರು. ಬಹುಮಾನ ಪ್ರಾಯೋಜಕರಾದ ಬೆಳ್ಳಾರೆ ರೋಟರಿ ಕ್ಲಬ್‌ನ ಅಧ್ಯಕ್ಷ ಚಂದ್ರಶೇಖರ ರೈ ಬಜನಿ, ಉದ್ಯಮಿ ಮಿಥುನ್ ಶೆಣೈ ಬೆಳ್ಳಾರೆ, ಬೆಳ್ಳಾರೆ ಜೈದೇವಿ ಟೆಕ್ಸ್ಟ್ ಟೈಲ್ಸ್ ಮಾಲಕರಾದ ಪುಕಾರಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೊಸರು ಕುಡಿಕೆಯಲ್ಲಿ ಪ್ರಥಮ ಬಹುಮಾನವಾಗಿ ರೂ. 10,024 ಮತ್ತು ಟ್ರೋಫಿಯನ್ನು ಶ್ರೀ ಶಾಸ್ತಾವು ರೆಂಜಾಳ ಪಡೆದುಕೊಂಡರು. ಉಳಿದಂತೆ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹಕ ನಗದು ಬಹುಮಾನ ನೀಡಲಾಯಿತು. ಸ್ನೇಹಿತರ ಕಲಾ ಸಂಘದ ಸದಸ್ಯ ಚೇತನ್ ಪಡ್ಪು ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ವಸಂತ ಉಲ್ಲಾಸ್ ವಂದಿಸಿದರು. ಗಿರೀಶ್ ಕಲ್ಲಪಣೆ ಕಾರ್ಯಕ್ರಮ ನಿರೂಪಿಸಿದರು.

ಸೆ. 1ರಂದು ಬೆಳ್ಳಾರೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 9.30ರಿಂದ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 2.30ರಿಂದ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಬೀಡುರವರ ಅಧ್ಯಕ್ಷತೆಯಲ್ಲಿ ಸಭಾ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್ ಮನ್ಮಥ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್. ರೈ, ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಸಂತೋಷ್ ಜಾಕೆ, ಎಸ್‌ಬಿಐ ಬೆಳ್ತಂಗಡಿ ಶಾಖೆಯ ಡೆಪ್ಯುಟಿ ಮ್ಯಾನೇಜರ್ ಮಹಾಬಲ ನಾಯ್ಕ್ ಪರ್ತಿಕೆರೆ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಚಂದ್ರಶೇಖರ ರೈ ಭಜನಿ, ಜೈದೇವಿ ಟೆಕ್ಸ್ ಟೈಲ್ಸ್ ಬೆಳ್ಳಾರೆ ಇದರ ಮಾಲಕರಾದ ಪುಕಾರಾಂ ರಾಥೋರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಜಪಿಲ್ಲ ಶ್ರೀಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ಮತ್ತು ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿರುವರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಿ ವಿ ಯವರಿಗೆ ಗುರುರತ್ನ ಪ್ರಶಸ್ತಿ, ಸಾಮಾಜಿಕ‌ ಸೇವೆಗಾಗಿ ಮಿಥುನ್ ಶೆಣೈ ಬೆಳ್ಳಾರೆ ಹಾಗೂ ದೇಶಸೇವೆಗಾಗಿ ನಿವೃತ್ತ ಯೋಧ ಗಣೇಶ್ ಮಡ್ತಿಲರಿಗೆ ಸನ್ಮಾನ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕಿಶನ್ ದ್ರಾವಿಡ್ ಹೇಮಂತ್ ರವರಿಗೆ ಅಭಿನಂದನೆ ನಡೆಯಲಿದೆ.