ಎಲಿಮಲೆ : ಯುವಕನ ಮೇಲೆ ತಂಡದಿಂದ ಹಲ್ಲೆ , ಪೆಟ್ಟು ತಿಂದ ಯುವಕ ಸುಳ್ಯ ಆಸ್ಪತ್ರೆಗೆ ದಾಖಲು

0

ಎಲಿಮಲೆಯಲ್ಲಿ ಯುವಕರ ತಂಡವೊಂದು ನಯಾಜ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದ್ದು, ಏಟು ತಿಂದ ಯುವಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಸ್ಥಳೀಯ ನಿವಾಸಿ ರಜತ್ ಎಂಬಾತ ಮಾತನಾಡಲಿಕ್ಕಿದೆಯೆಂದು ತನ್ನನ್ನು ಗ್ಯಾರೇಜಿಗೆ ಕರೆಸಿಕೊಂಡು, ತಾನು ಹೋದಾಗ ಗುಂಪು ಸೇರಿಸಿ ಯದ್ವಾತದ್ವಾ ಹೊಡೆದಿರುವುದಾಗಿಯೂ, ಮಹಿಳೆಯರಿಗೆ ಮೆಸೇಜ್ ಮಾಡುವುದೇಕೆಂದು ತನ್ನನ್ನು ಪ್ರಶ್ನಿಸಿದಾಗ, ತಾನು ಯಾವುದೇ ಮೆಸೇಜ್ ಮಾಡಿಲ್ಲವೆಂದು ಹೇಳಿದರೂ ಕೇಳದೆ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾಗಿಯೂ ನಯಾಜ್ ಸುಳ್ಯ ಆಸ್ಪತ್ರೆಯಲ್ಲಿ ಹೇಳಿಕೊಂಡಿದ್ದಾರೆ.


ಆಸ್ಪತ್ರೆಗೆ ಪೋಲೀಸರು ಬಂದಿದ್ದು ನಯಾಜ್ ರಿಂದ ಹೇಳಿಕೆ ಪಡೆದಿರುವುದಾಗಿ ತಿಳಿದುಬಂದಿದೆ.