ಭಾರತ ಸಂವಿಧಾನ ಸಂಭ್ರಮ ಕಾರ್ಯಕ್ರಮದ 2ನೇ ದಿನವಾದ ನ.27ರಂದು ಅರಿವು ಕೇಂದ್ರ ಅಜ್ಜಾವರದಲ್ಲಿ ಮಕ್ಕಳಿಗೆ ಭಾರತದ ಸಂವಿಧಾನದ ಪ್ರಸ್ತಾವನೆ ಗಟ್ಟಿ ಓದು, ರಸಪ್ರಶ್ನೆ, ಅಶುಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕಮ ದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ದೇವಕಿ ವಿಷ್ಣುನಗರ ವಹಿಸಿದ್ದರು. ಸ್ಪರ್ಧೆಯಲ್ಲಿ ಮಕ್ಕಳಿ ಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಯಿತು ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಲೀಲಾ ಮನಮೋಹನ, ಸತ್ಯವತಿ ಬಸವನಪಾದೆ, ಸ್ಪರ್ಧಾ ತೀರ್ಪುಗಾರದ ರಶ್ಮಿತಾ ಕರ್ಕೇರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಂಥಾಲಯ ಮೇಲ್ವಿಚಾರಕರು, ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪಂಚಾಯತ್ ಸಿಬ್ಬಂದಿ ವರ್ಗ, VRW ಉಸ್ಥಿತರಿದ್ದರು. ಪಂಚಾಯತ್ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪಂಚಾಯತ್ ಸದಸ್ಯರಾದ ಲೀಲಾ ಮನಮೋಹನರವರ ಪುತ್ರ ಶರಣ್ ರವರ ಹುಟ್ಟುಹಬ್ಬದ ಹಬ್ಬದ ಪ್ರಯುಕ್ತ ಸಿಹಿತಿಂಡಿ ನೀಡಿದ್ದರು. ಸ್ವಾಗತವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಧನ್ಯವಾದವನ್ನು ಗ್ರಂಥಾಲಯ ಮೇಲ್ವಿಚಾರಕರು ನೆರವೇರಿಸಿದರು.