ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಸಂತ ಸಂಭ್ರಮ ಪ್ರಯುಕ್ತ ವಿದ್ಯಾರ್ಥಿಗಳ ಕ್ರೀಡಾಕೂಟ – ಸನ್ಮಾನ

0

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಸಂತ ಸಂಭ್ರಮದ ಸಂಭ್ರಮದಲ್ಲಿದ್ದು ಪ್ರಾಥಮಿಕ,ಪ್ರೌಢ,ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಮತ್ತು ಸನ್ಮಾನ ಕಾರ್ಯಕ್ರಮವು ಡಿ.21 ರಂದು ನಡೆಯಿತು.

ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವಿನ್ ಭಂಡಾರಿ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ವಸಂತ ಸಂಭ್ರಮ ಸಮಿತಿಯ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಪುತ್ತೂರು ಶಂಕರ್ ಸಮೂಹ ಸಂಸ್ಥೆಗಳ ಚೆಯರ್ ಮೆನ್ ಸತ್ಯಶಂಕರ ಕೆ .ಯವರನ್ನು ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ ರವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜನಾರ್ಧನ ಕೆ.ಎನ್,ಶಾಲಾ ಮುಖ್ಯ ಗುರು ಮಾಯಿಲಪ್ಪ, ವಸಂತ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ, ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ, ಕಟ್ಟಡ ಸಮಿತಿ ಅಧ್ಯಕ್ಷ ಹರ್ಷ ಜೋಗಿಬೆಟ್ಟು,ಸಮಿತಿಯ ಪದಾಧಿಕಾರಿಗಳಾದ ಶರತ್ ಪೂಗವನ, ಕೃಷ್ಣಪ್ರಸಾದ್, ದಯಾಕರ ಆಳ್ವ ಪೆರುವಾಜೆ,ಎಸ್.ಡಿ.ಎಂ.ಸಿ.ಸದಸ್ಯೆ ನಸೀಮಾ, ನಿವೃತ್ತ ಶಿಕ್ಷಕ ಪದ್ಮನಾಭ,ರಾಷ್ಟ್ರಮಟ್ಟದ ಕ್ರೀಡಾಪಟು ಕಿಶನ್ ದ್ರಾವಿಡ್ ,ಪಿ.ಎನ್.ಭಟ್ ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮದ ಮೊದಲು ಗೌರವ ವಂದನೆ,ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.


ಬಳಿಕ ವಸಂತ ಸಂಭ್ರಮ ಸಮಿತಿ ಸಂಚಾಲಕ ಎಸ್.ಎನ್.ಮನ್ಮಥರವರು ಧ್ವಜಾರೋಹಣ ನೆರವೇರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಜನಾರ್ಧನ್ ಕೆ.ಎನ್.ಸ್ವಾಗತಿಸಿ,ನಿವೃತ್ತ ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ,ವಿದ್ಯಾರ್ಥಿಗಳಾದ ಶರಧಿ ಮತ್ತು ಶಾಲ್ಮಲಿ ಪ್ರಾರ್ಥಿಸಿದರು.
ಉಪಪ್ರಾಂಶುಪಾಲೆ ಉಮಾಕುಮಾರಿ ವಂದಿಸಿದರು.