ಸುಳ್ಯ ಗಾಂಧಿನಗರ ಅರಣ್ಯ ಇಲಾಖೆ ಕಚೇರಿ ಬಳಿ ಕ್ವಾಟ್ರಸ್ ಹಿಂಭಾಗ ಕೊಳೆತು ನಾರುವ ಸ್ಥಿತಿಯಲ್ಲಿ ಗಂಡಸಿನ ಮೃತ ದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಬಂದಿದ್ದು ತನಿಖೆ ಆರಂಭಿಸಿದ್ದಾರೆ.

ಮೃತವ್ಯಕ್ತಿ ಮೂಲತಃ ಈಶ್ವರಮಂಗಲ ನಿವಾಸಿ ನಾರಾಯಣ ಎಂದು ಹೇಳುತ್ತಿದ್ದಾರೆ. ಸುಳ್ಯ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರೆಂದು ತಿಳಿದು ಬಂದಿದೆ.
ಇವರಿಗೆ ವಿವಾಹವಾಗಿದ್ದು, ಇಬ್ಬರು ಪುತ್ರಿಯರು ಹಾಗೂ ಪತ್ನಿ ಜೊತೆ ಜಗಳ ಮಾಡಿ ಮನೆಗೆ ಹೋಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಅಂದಾಜು 38 ವರ್ಷ ಎಂದು ತಿಳಿದು ಬಂದಿದೆ.