ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಇದರ ಸಹಕಾರದೊಂದಿಗೆ 10 ದಿನಗಳ ಕಾಲ ನಡೆಯುವ ವಾಲಿಬಾಲ್ ತರಬೇತಿ ಶಿಬಿರಕ್ಕೆ ಎ.11ರಂದು ಚಾಲನೆ ನೀಡಲಾಯಿತು. ಎ.21ರಂದು ಶಿಬಿರದ ಸಮಾರೋಪ ನಡೆಯುವುದು.
ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ ಶುಭ ಹಾರೈಸಿ ಶಿಬಿರಕ್ಕೆ ಚಾಲನೆ ನೀಡಿದರು.
ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಸಂಶುದ್ದೀನ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಎಸ್.ಸಿಕ್ಸ್ ಗೌರವಾಧ್ಯಕ್ಷ ಗೋಕುಲ್ ದಾಸ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ. ವಸಂತ, ನಟರಾಜ ಎಂ.ಎಸ್., ಹರಿಪ್ರಕಾಶ್ ಅಡ್ಕಾರ್, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಕಾರ್ಯದರ್ಶಿ ನಮಿತಾ ಹರ್ಲಡ್ಕ, ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ರಾಜು ಪಂಡಿತ್, ವಾಲಿಬಾಲ್ ಅಸೋಸಿಯೇಷನ್ ತಾಲೂಕು ಕಾರ್ಯದರ್ಶಿ ಜಯಪ್ರಕಾಶ್, ಕೋಶಾಧಿಕಾರಿ ಕೆ.ಬಿ.ಇಬ್ರಾಹಿಂ, ಭವಾನಿ ಶಂಕರ ಕಲ್ಮಡ್ಕ, ಶಶಿಧರ ಎಂ.ಜೆ., ತಾರನಾಥ ಕೊಡೆಂಚಿಕಾರ್, ಸುದರ್ಶನ ಸುಳ್ಯ, ಪವನ್ ಮುಂಡ್ರಾಜೆ, ಮಂಜುನಾಥ್ , ಗಣೇಶ್, ಅಶ್ರಫ್‌ಗುಂಡಿ ಮೊದಲಾದವರಿದ್ದರು.
ರಾಷ್ಟ್ರೀಯ ವಾಲಿಬಾಲ್ ತರಬೇತುದಾರರು ಹಾಗೂ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜೇಶ್ ಪತ್ತಾರ್ ತರಬೇತಿ ನೀಡಲಿದ್ದಾರೆ.