Home ಅಪಘಾತ ದೇವರಕೊಲ್ಲಿ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

ದೇವರಕೊಲ್ಲಿ ಬಳಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

0

ಕಾರಿನಲ್ಲಿ ಗಾಂಜಾ ಪ್ಯಾಕೆಟ್ ಪತ್ತೆ, -ಪೊಲೀಸರಿಂದ ತನಿಖೆ

ದೇವರಕೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿ ಯಾಗಿದ್ದು ಈ ವೇಳೆ ಕಾರನ್ನು ಎತ್ತಿ ಸರಿ ಪಡಿಸಲು ಹೋದ ಸ್ಥಳೀಯರಿಗೆ ಕಾರಿನಲ್ಲಿ ಗಾಂಜಾ ಪ್ಯಾಕೆಟ್ ಇದ್ದ ಘಟನೆಯ ಬಗ್ಗೆ ಪ್ರಕರಣ ಬಯಲಿಗೆ ಬಂದಿದೆ.

ಏ 12 ರಂದು ಸಂಜೆ ಪಿರಿಯಾಪಟ್ಟಣದಿಂದ ಮಡಿಕೇರಿ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕಾರು
ದೇವರಕೊಲ್ಲಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಯಿತು.

ಈ ಸಂದರ್ಭ ನೆರವಿಗೆ ಧಾವಿಸಿ ಬಂದ ಸ್ಥಳೀಯರಿಗೆ ಕಾರಿನಲ್ಲಿ ಗಾಂಜಾ ಪ್ಯಾಕೇಟ್ ಗಳು ಪತ್ತೆಯಾಗಿದ್ದು ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದಿದ್ದು ವಿಚಾರಣೆ ನಡೆಸಿದಾಗ ಕಾರಿನಲ್ಲಿದ್ದವರು ಪುತ್ತೂರು ನಿವಾಸಿಗಳಾಗಿದ್ದು ಅವರ ಹೆಸರುಗಳು ಫಜ್ಲುದ್ದೀನ್, ಮುಷ್ತಾಕ್, ಜಾಬಿರ್ ಎಂದು ತಿಳಿದು ಬಂದಿದೆ. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದು ಅಲ್ಲದೆ ಕಾರಿನ ಲ್ಲಿದ್ದ ಗಾಂಜಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

NO COMMENTS

error: Content is protected !!
Breaking