ಕುಂಬರ್ಚೋಡು: ಮದರಸ ಬಳಿ ಅಪಾಯಕಾರಿ ಮರವನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯತ್ ಪಿಡಿಒ ರವರಿಗೆ ಮನವಿ

ಕುಂಬರ್ಚೋಡು ಮಸ್ಜಿದ್ & ಮದರಸದ ಬಳಿ ಅಪಾಯಕಾರಿ ಸ್ಥಿತಿಯಲ್ಲಿದ್ದು ಇದನ್ನು ತೆರವುಗೊಳಿಸಿ ಕೊಡುವಂತೆ ಸ್ಥಳೀಯ ಮಸೀದಿಯ ಕಮಿಟಿಯ ಪದಾಧಿಕಾರಿಗಳು ಜಾನ್ಸೂರು ಗ್ರಾಮ ಪಂಚಾಯತ್ ಪಿಡಿಒ ರವರಿಗೆ ಮನವಿಯನ್ನು ನೀಡಿದ್ದಾರೆ.


ಮರದ ಬುಡದಿಂದ ಮಣ್ಣು ಜರಿದು ಬೀಳುವ ಸ್ಥಿತಿಯಲ್ಲಿ ನಿಂತಿದ್ದು ಗಾಳಿ ಮಳೆಯಿಂದಾಗಿ ಯಾವುದೇ ಸಮಯದಲ್ಲಿಯೂ ಮುರಿದು ಬೀಳುವ ಸಂಭವವಿದೆ.

ಮದರಸದಲ್ಲಿ ಸುಮಾರು 40 ರಿಂದ 50 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಸದ್ರಿ ಮರವು ಮುರಿದು ಬಿದ್ದಲ್ಲಿ ಮಕ್ಕಳ ಜೀವಕ್ಕೆ ಮತ್ತು ಮಸೀದಿ,ಮದರಸಕ್ಕೆ ಅಪಾಯ ಮತ್ತು ತೀವ್ರ ನಷ್ಟ ಉಂಟಾಗಲಿದೆ. ಆದುದರಿಂದ ಸದ್ರಿ ಜಾಗವನ್ನು ಪರಿಶೀಲಿಸಿ ಸೂಕ್ತ ರೀತಿಯ ಪರಿಹಾರವನ್ನು ಕಲ್ಪಿಸಿಕೊಡುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.


ಈ ಸಂದರ್ಭದಲ್ಲಿ ಮಸೀದಿ ಕಮಿಟಿಯ ಅಧ್ಯಕ್ಷ ಹನೀಫ್ ಕೆ ಎಂ,ಪದಾಧಿಕಾರಿಗಳಾದ ಅಬ್ದುಲ್ ಖಾದರ್ ಅಕ್ಕರೆ, ಕುಂಞಾಮು ಎಂ, ಅಬ್ದುಲ್ ಗಪ್ಪೂರ್ ಉಪಸ್ಥಿತರಿದ್ದರು.