ಸೋಣಂಗೇರಿಯ ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ
ಅಯ್ಯಪ್ಪ ಸ್ವಾಮಿ ದೇವಸ್ಥಾನದ
ನವೀಕರಣ ನೂತನ ಗರ್ಭಗುಡಿಯಲ್ಲಿ
ಶ್ರೀ ಅಯ್ಯಪ್ಪ ಸ್ವಾಮಿಯ
ನೂತನ ಬಿಂಬ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಹಾಗೂ
ಮಹಾಕುಂಭಾಭಿಷೇಕ
ಕಾರ್ಯಕ್ರಮಗಳು ಡಿ.22 ಮತ್ತು 23ರಂದು ವೇ। ಮೂ। ಪುರೋಹಿತ ನಾಗರಾಜ ಭಟ್, ಸುಳ್ಯ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
ಡಿ. 22ರಂದು
ಬೆಳಗ್ಗೆ ಘಂಟೆ 8-00ರಿಂದ
ಶ್ರೀ ಗಣಪತಿ ಹವನ, ಹಸಿರುವಾಣಿ ಸಮರ್ಪಣೆ, ಉಗ್ರಾಣ ಮುಹೂರ್ತ, ಧಾನ್ಯಲಕ್ಷ್ಮೀ ಪೂಜಾ
ಸಂಜೆ ಘಂಟೆ 6-00ಕ್ಕೆ
ಶ್ರೀ ತಂತ್ರಿಗಳು ಹಾಗೂ ವೈದಿಕರ ಆಗಮನದೊಂದಿಗೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.
ಡಿ.23ರಂದು
ಬೆಳಗ್ಗೆ ಘಂಟೆ 6-00ರಿಂದ
ಉಷಃ ಪೂಜಾ, ಬ್ರಹ್ಮಕಲಶ ಪೂಜಾ, ಪ್ರತಿಷ್ಠಾಂಗ ಹವನ
ಬೆಳಿಗ್ಗೆ ಗಂಟೆ 9.18ರಮಕರ ಲಗ್ನ ಶುಭ ಮಹೂರ್ತದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠೆ ಉಪ ಕಲಶಾಭಿಷೇಕ,ಶಿಖರ ಪ್ರತಿಷ್ಠೆ,ಬೆಳಗ್ಗೆ ಘಂಟೆ 10-00ರಿಂದ
ಗಣಪತಿ ಹವನ,ಐಕ್ಯಮತ್ಯಹವನಂ, ಶಾಸ್ತಾರ ಹವನ,
ಪೂರ್ವಾಹ್ನ ಘಂಟೆ 10-18ರ
ಮಕರ ಲಗ್ನ ಶುಭ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ಮಹಾ – ಬ್ರಹ್ಮಕುಂಭಾಭಿಷೇಕ ನಡೆಯಲಿದೆ.
ಮಧ್ಯಾಹ್ನ ಘಂಟೆ 12-00ಕ್ಕೆ
ಹವನ ಪೂರ್ಣಾಹುತಿ,
ಪ್ರಸಾದ ವಿತರಣೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಘಂಟೆ 2-00ರಿಂದ
ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ,
ಸಂಜೆ ಘಂಟೆ 6-00ಕ್ಕೆ ಭಜನಾ ಮಂಗಳಂ,ದೀಪ ಸ್ಥಾಪನೆ, ದೇವರ ಸನ್ನಿಧಿಯಲ್ಲಿ ಹಣ್ಣುಕಾಯಿ ಸಮರ್ಪಣೆ,ಪಡಿಪೂಜೆ ನಡೆಯಲಿದೆ. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 8.30ರಿಂದ
ಶ್ರೀ ಸನ್ನಿಧಿಯಲ್ಲಿ ಅಲಂಕಾರ ಪೂಜೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ,
ರಾತ್ರಿ9-30ರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.