ಕಳವುಗೈಯುತ್ತಿರುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆ
ಗೂಡಂಗಡಿಯಿಂದ ಮೊಬೈಲ್ ಫೋನನ್ನು ರಾತ್ರಿ ವೇಳೆ ಕಳವುಗೈಯಲಾಗಿದ್ದು, ಕಳವುಗೈಯುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಸೆ.15ರಂದು ರಾತ್ರಿ 10 ಗಂಟೆಯ ವೇಳೆಗೆ ಅಪರಿಚಿತ ವ್ಯಕ್ತಿಯೋರ್ವ ಜಾಲ್ಸೂರಿನ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿರುವ ದೇವಪ್ಪ ಅವರ ಗೂಡಂಗಡಿಗೆ ಬಂದು ಸಾಮಾಗ್ರಿ ಖರೀದಿಯ ನೆಪದಲ್ಲಿ ಟೇಬಲ್ ಮೇಲೆ ಇಟ್ಟಿದ್ದ ಅವರ ಮೊಬೈಲನ್ನು ಕಳವುಗೈದಿದ್ದು, ಈ ದೃಶ್ಯ ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.