ಮರ್ಕಂಜದ ಕಲ್ಲುಕೋರೆಯಿಂದ ಜಲ್ಲಿ ಸಾಗಾಟ

0

ಮರ್ಕಂಜದ ಅಳವುಪಾರೆ ಕಲ್ಲು‌ಕೋರೆಯಿಂದ ಜಲ್ಲಿ ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿ ಜಲ್ಲಿ ಸಾಗಾಟ ಮಾಡುತ್ತಿದ್ದ ಲಾರಿಗೆ ತಡೆಯೊಡ್ಡಿದ ಘಟನೆ ಇದೀಗ ವರದಿಯಾಗಿದೆ.

ಅಳವುಪಾರೆ ಗಣಿಗಾರಿಕೆಯಿಂದ ಸ್ಥಳೀಯ ನಿವಾಸಿಗಳು ತೊಂದರೆಗೆ ಈಡಾಗುತ್ತಿದ್ದಾರೆಂದು ಕೆಲ ದಿನಗಳ ಹಿಂದೆ ಸುಳ್ಯ ತಹಶೀಲ್ದಾರ್ ರವರಿಗೆ ಮನವಿ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಅವರು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ತಡೆ ನೀಡಿದ್ದರು.

ಇದೀಗ ಅಳವುಪಾರೆ ಗಣಿಗಾರಿಕೆಯಲ್ಲಿ ಸ್ಟಾಕ್ ಆಗಿದ್ದ ಜಲ್ಲಿಗಳನ್ನು ತೆಗೆದುಕೊಂಡು‌ ಹೋಗುತ್ತಿದ್ದಾಗ ಸ್ಥಳೀಯರು ಆಕ್ಷೇಪಿಸಿ ಲಾರಿಗೆ ತಡೆ ಮಾಡಿದ್ದಾರೆ. ಸ್ಥಳಕ್ಕೆ ಪೋಲೀಸರು ಆಗಮಿಸಿರುವುದಾಗಿ ತಿಳಿದು ಬಂದಿದೆ.‌