ನಗರದ ಕುಡಿಯುವ ನೀರಿನ ಯೋಜನೆಗೆ 9೦ ಕೋಟಿ ರೂ ಮಂಜೂರು
ನಗರ ಪಂಚಾಯತ್ ನಿರ್ಗಮಿತ ಅಧ್ಯಕ್ಷ ವಿನಯ ಕಂದಡ್ಕ
ಕಳೆದ ಎರಡೂವರೆಗೆ ವರ್ಷದ ನಗರ ಪಂಚಾಯತ್ ಆಡಳಿತ ಮಂಡಳಿಯ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ ರೂ.೯೦ ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಆಗಿದೆ. ಇನ್ನಷ್ಟು ಕೆಲಸಗಳು ಆಗಬೇಕಿದ್ದು ಅದನ್ನು ಮುಂದಿನ ಎರಡೂವರೆ ವರ್ಷದಲ್ಲಿ ನೂತನ ಅಧ್ಯಕ್ಷರೊಂದಿಗೆ ಸೇರಿಕೊಂಡು ಮಾಡಲಾಗುವುದು ಎಂದು ನಗರ ಪಂಚಾಯತ್ ನಿರ್ಗಮಿತ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದ್ದಾರೆ.
ಮೇ.೨೭ರಂದು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ನಗರ ಪಂಚಾಯತ್ ಆವರಣದಲ್ಲಿದ್ದ ಕಸ ಸಾಗಾಟ ಸವಾಲಾಗಿತ್ತು. ಅದು ರಾಜ್ಯಮಟ್ಟದಲ್ಲಿಯೂ ಸುದ್ದಿಯಾಯಿತು. ಇಲ್ಲಿ ಜಾಗದ ಕೊರತೆ ಒಂದಾದರೆ, ಈ ಹಿಂದೆ ಇಲ್ಲಿದ್ದ ಅಧಿಕಾರಿಗಳ ಉದಾಸೀನ ಕಾರಣದಿಂದ ಕಸವನ್ನು ಶೆಡ್ನಲ್ಲಿ ಇಟ್ಟರು. ಈ ಕಸ ಸಾಗಾಟಕ್ಕೆ ಎಸ್ಆರ್ ರೇಟ್ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಿzವೆ. ಇದು ರಾಜ್ಯದಲ್ಲೇ ಪ್ರಥಮ ಇರಬಹುದು. ಸ್ವಲ್ಪ ಖರ್ಚು ಹೆಚ್ಚಾದರೂ ಇಂದು ಕಸ ಸಾಗಾಟದಲ್ಲಿ ಯಶಸ್ವಿಯಾಗಿzವೆ. ಎಲ್ಲ ಕಸವೂ ಸಾಗಾಟ ಮಾಡಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಕಲ್ಚೆರ್ಪೆಯಲ್ಲಿ ಮಾಡಲಾದ ಕೆಲಸ ಖುಷಿ ಕೊಟ್ಟಿದೆ. ಈಗಿನ ಸಾಮರ್ಥ್ಯದಲ್ಲಿ ೫೦೦ ಕಜಿ ಕಸ ಬರ್ನ್ ಮಾಡಲಾಗುತ್ತದೆ. ಇನ್ನಷ್ಟು ಆಧುನೀಕರಣ ಬಳಸಿಕೊಂಡರೆ ದಿನಕ್ಕೆ ೨ ಸಾವಿರ ಕೆಜಿ ಕಸ ಬರ್ನ್ ಮಾಡುವ ಜತೆಗೆ ೧೦೦ ಕೆವಿ ವಿದ್ಯುತ್ ಉತ್ಪಾದನೆಯೂ ಮಾಡಬಹುದಾಗಿದೆ. ಆದರೆ ಅಲ್ಲಿ ಪಂಚಾಯತ್ಗೆ ೩ ಎಕ್ರೆ ಜಾಗ ಇತ್ತು. ಅದರಲ್ಲಿ ಒಂದು ಎಕ್ರೆ ಪಂಚಾಯತ್ನಲ್ಲಿದೆ. ಇನ್ನು ಎರಡು ಎಕ್ರೆ ಪಡೆದುಕೊಳ್ಳಲು ಎಲ್ಲ ಪ್ರಯತ್ನ ನಡೆಸಲಾಯಿತು. ಆದರೆ ಪರಿಸರ ಇಲಾಖೆ ಆಕ್ಷೇಪದಿಂದ ಅದು ಸಾಧ್ಯವಾಗಿಲ್ಲ ಎಂದು ವಿವರ ನೀಡಿದರು.
ನಗರದ ಕುಡಿಯುವ ನೀರಿನ ಯೋಜನೆಗೆ ಈ ೨೦೦೭-೦೮ರಲ್ಲಿಯೇ ಪ್ರಸ್ತಾಪನೆ ಸರಕಾರಕ್ಕೆ ಸಲ್ಲಿಸಲಾಗಿತ್ತಾದರೂ ಅದು ಆಗಿರಲಿಲ್ಲ. ನಮ್ಮ ಆಡಳಿತ ಬಂದ ಬಳಿಕ ಆ ಬಗ್ಗೆ ಪ್ರಯತ್ನ ನಡೆಸಲಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರದ ಯೋನೆಯಿಂದ ೬೦ ಕೋಟಿ ರೂ ಯೋಜನೆಗೆ ಅನುಮೋದನೆ ದೊರೆತಿದೆ. ಒಂದು ತಿಂಗಳೊಳಗೆ ಟೆಂಡರ್ ಪೂರ್ಣಗೊಳ್ಳಲಿದ್ದು, ಕುರುಂಜಿಗುಡ್ಡೆಯಲ್ಲಿ ಶುದ್ಧೀಕರಣ ಘಟಕ ಆಗಲಿದೆ. ಮುಂದಿನ ಎರಡು ವರ್ಷದಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ನಗರ ವಿವಿಧ ಭಾಗದಲ್ಲಿ ರಸ್ತೆ, ಚರಮಡಿ ಸೇರಿ ೧೨ ಕೋಟಿ ವೆಚ್ಚದಲ್ಲಿ ಕೆಲಸಗಳು ಆಗಿದೆ. ಕುರುಂಜಿಗುಡ್ಡೆಯಲ್ಲಿ ಪಾರ್ಕ್ ಮಾಡಲಾಗಿದೆ ಒಟ್ಟಾರೆಯಾಗಿ ಜನರಿಗೆ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿzವೆ. ನಮ್ಮ ಈ ಕಾರ್ಯಕ್ಕೆ ಸಚಿವರು, ಸರಕಾರ ಆಡಳಿತ ಮಂಡಳಿ ಸಹಕಾರ ನೀಡಿದೆ. ಎಲ್ಲರಿಗೂ ಆಭಾರಿಯಾಗಿzವೆ ಎಂದು ಹೇಳಿದರು.
ಇನ್ನೂ ಆಗಬೇಕಾದ ಕೆಲಸವೂ ಇದೆ. ಸೂಡ ನಿಯಮಗಳು ಸರಳವಾಗಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ನಿವೇಶನ ರಹಿತರಿಗೆ ನಿವೇಶನ ಕೊಡಲು ಆಗಿಲ್ಲ. ೪೫೨ ಅರ್ಜಿಗಳು ಬಂದಿದೆ. ಅದನ್ನು ಮುಂದಿನ ದಿನದಲ್ಲಿ ಮಾಡುವ ಪ್ರಯತ್ನ ಮಾಡುತ್ತೇವೆ ಒಳಚರಂಡಿ ಕಾಮಗಾರಿಯೂ ಪರಿಪೂರ್ಣವಾಗಿಲ್ಲ ಎಂದು ವಿವರ ನೀಡಿದರು.
ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ, ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸದಸ್ಯರುಗಳಾದ ಸುಧಾಕರ ಕುರುಂಜಿಭಾಗ್, ಸುಶೀಲ ಜಿನ್ನಪ್ಪ ಪೂಜಾರಿ, ಬಾಲಕೃಷ್ಣ ರೈ ದುಗಲಡ್ಕ ಇದ್ದರು.