ರಘುರಾಮ ಕೋಟೆ, ಶಶಿಧರ ಕೋಟೆಯವರಿಗೆ ಮಾತೃ ವಿಯೋಗ
ಹಿರಿಯ ಸಹಕಾರಿ, ಸಾಮಾಜಿಕ, ರಾಜಕೀಯ, ಧಾರ್ಮಿಕ ಧುರೀಣರಾಗಿದ್ದ ದಿ. ಕೋಟೆ ವಸಂತ ಕುಮಾರರ ಪತ್ನಿ ಶ್ರೀಮತಿ ಪಾರ್ವತಿ ಕೋಟೆ ಇಂದು ಸಂಜೆ ನಿಧನರಾದರು. ಇವರಿಗೆ 81 ವರ್ಷ ವಯಸ್ಸಾಗಿತ್ತು.
ಇವರು ಪೆರುವಾಜೆಯಲ್ಲಿರುವ ತಮ್ಮ ಮಗಳು ಶಶಿಕಲಾ ಗಣಪಯ್ಯ ವನಸಿರಿಯವರ ಮನೆಯಲ್ಲಿದ್ದರು. ಅಲ್ಲಿ ಅಸೌಖ್ಯಕ್ಕೊಳಗಾದಾಗ ಅವರು ಗಣಪಯ್ಯರು ತಮ್ಮ ಕಾರಿನಲ್ಲಿ ಸುಳ್ಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪುತ್ರರಾದ ಕೋಟೆ ಫೌಂಡೇಶನ್ ನ ಸ್ಥಾಪಕ, ಉದ್ಯಮಿ ರಘುರಾಮ ಕೋಟೆ, ಖ್ಯಾತ ಗಾಯಕ ಶಶಿಧರ ಕೋಟೆ, ಪುತ್ರಿ ಶ್ರೀಮತಿ ಶಶಿಕಲಾ, ಅಳಿಯ ಗಣಪಯ್ಯ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.