ಸಂಪಾಜೆ ಗ್ರಾ.ಪಂ. : ಕಲ್ಲುಗುಂಡಿ ಪೇಟೆಯಲ್ಲಿ 3 ಕೊಠಡಿಗಳ ಹೊಸ ಮಾರುಕಟ್ಟೆ ಸಂಕೀರ್ಣ ಲೋಕಾರ್ಪಣೆ

0

ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ನೂತನ ಮಾರುಕಟ್ಟೆ ಸಂಕಿರ್ಣಕ್ಕೆ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಕೊಠಡಿ 1ನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಉದ್ಘಾಟನೆ ಮಾಡಿದರು 2ನೇ ಕೋಟಡಿಯನ್ನು ಪದ್ಮಯ್ಯ ಗೌಡ ಹಾಗೂ ಜಗದೀಶ್ ರೈ ಉದ್ಘಾಟಿಸಿದರು.3 ನೇ ಕೋಟಡಿ ಯನ್ನು ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಹಾಗೂ ಸುಂದರಿ ಮುಂಡಡ್ಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ವಹಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಎಸ್. ಕೆ. ಹನೀಫ್, ವಿಜಯಕುಮಾರ್ ಆಲಡ್ಕ, ರಜನಿ ಶರತ್ ವಿಮಲಾ ಪ್ರಸಾದ್, ಸುಶೀಲಾ, ಪ್ರಶಾಂತ್ ವಿ. ವಿ ಅಬೂಬಕ್ಕರ್ ಜನತಾ, ಕಾರ್ಮಿಕ ಮುಖಂಡ ರಾಜು ನೆಲ್ಲಿಕುಮೇರಿ,ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ, ಸಿಬ್ಬಂದಿ ಗಳಾದ ಭರತ್, ಹರ್ಷಿತ್, ಪ್ರೀತಮ್, ಮೊದಲಾದವರು ಉಪಸ್ಥಿತರಿದ್ದರು.