ಸುಳ್ಯದ ಓಡಬಾಯಿ ಬಳಿ ಗ್ರಾಂಡ್ ವ್ಹೀಲ್ ಉದ್ಘಾಟನೆ

0

ಸುಳ್ಯದ ಓಡಬಾಯಿ ಮಾಂಡೋವಿ ಶೋ ರೂಂ ಬಳಿ ಆರ್ ಕೆ ಕಾಂಪ್ಲೆಕ್ಸ್‌ನಲ್ಲಿ ಗ್ರ್ಯಾಂಡ್ ವ್ಹೀಲ್ಸ್ ಮಳಿಗೆ ಜೂ.8 ರಂದು ಶುಭಾರಂಭಗೊಂಡಿತು.


ಮಳಿಗೆಯಲ್ಲಿ ಎಲ್ಲಾ ತರಹದ ಟಯರ್ಸ್,ಆಲೋವ್ಹೀಲ್ಸ್,ವ್ಹೀಲ್ ಎಲೈಮೆಂಟ್,ವ್ಹೀಲ್ ಬ್ಯಾ ಲೆನ್ಸಿಂಗ್,ನೈಟ್ರೋಜನ್ ಮತ್ತು ವಾಹನಗಳ ಇತರ ಬಿಡಿಭಾಗಗಳು ದೊರೆಯುವ ಮಳಿಗೆ ಇದರ ಉದ್ಘಾಟನೆಯನ್ನು ಸೀಪುಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿ ಇಬ್ರಾಹಿಂ ಹಾಜಿ ನೆರವೇರಿಸಿದರು. ಸುಳ್ಯ ವರ್ತಕರ ಸಂಘದ ಸುಧಾಕರ್ ರೈ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ, ದ.ಕ ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಮುಸ್ತಫಾ ಜನತಾ, ನ.ಪಂ ಸದಸ್ಯರಾದ ಉಮ್ಮರ್ ಕೆ.ಎಸ್, ಶರೀಫ್ ಕಂಠಿ, ಶಾಂತಿನಗರ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ನಝೀರ್ ಶಾಂತಿನಗರ, ಉದ್ಯಮಿ ರೂಪಾ ಸುಂದರ್ ರಾವ್, ರಾಜಧಾನಿ ಜುವೆಲ್ಲರ್ ಮಾಲಕ ರಜಾಕ್ ಹಾಜಿ,ಆರ್ ಕೆ ಕಾಂಪ್ಲೆಕ್ಸ್ ಮಾಲಕ ರಾಧಾಕೃಷ್ಣ ಪಕಳ,ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪ್ಪಾಡಿ, ಉದ್ಯಮಿ ಹೆಚ್ ಎ ಅಶ್ರಫ್ ಬಾಲೆಂಬಿ ಮೊದಲಾದವರು ಉಪಸ್ಥಿತರಿದ್ದರು.


ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಆರ್. ಬಿ. ಬಶೀರ್ ಸ್ವಾಗತಿಸಿ, ನಜೀರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.