ಸುಳ್ಯದಲ್ಲಿ ಪ್ರತೀ ಆದಿತ್ಯವಾರ ಇಂಪ್ಯಾಕ್ಟ್ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಕ್ಲಬ್ ವತಿಯಿಂದ ಕರಾಟೆ ತರಬೇತಿ

0

ಸುಳ್ಯದ ಇಂಪ್ಯಾಕ್ಟ್ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಕ್ಲಬ್ ಶಿಟೋ ಕರಾಟೆ ಡು ವತಿಯಿಂದ ಕರಾಟೆ ತರಬೇತಿಯು ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರ ನೇತೃತ್ವದಲ್ಲಿ ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿರುವ ಅಮೃತ ಭವನದಲ್ಲಿ ಪ್ರತೀ ಆದಿತ್ಯವಾರ ಜರುಗಲಿದೆ.


ಕರಾಟೆಯು ಒಂದು ಪುರಾತನ ಕಾಲದ ಯುದ್ಧ ಕೌಶಲವನ್ನು ಹೊಂದಿದ ವಿಶಿಷ್ಟವಾದ ಕಲೆಯಾಗಿದ್ದು, ಸರಕಾರವು ಕರಾಟೆಯನ್ನು ಕ್ರೀಡೆ ಎಂದು ಘೋಷಿಸಿದೆ. ಮನುಷ್ಯ ಮಾನಸಿಕವಾಗಿ, ದೈಹಿಕವಾಗಿ ಬಲಿಷ್ಟನಾಗಿ ಆರೋಗ್ಯವಂತನಾಗಿದ್ದು, ಮಾನಸಿಕ ಒತ್ತಡ ಖಿನ್ನತೆ ಮತ್ತು ಜಡತ್ವವನ್ನು ನಿವಾರಿಸಲು ಕರಾಟೆ ಶಿಕ್ಷಣವು ಅತ್ಯಂತ ಸಹಕಾರಿಯಾಗಿದೆ. ತರಬೇತಿ ಶಿಬಿರವು ಪ್ರತೀ ಆದಿತ್ಯವಾರ ಬೆಳಿಗ್ಗೆ 8ರಿಂದ 10.30ರವರೆಗೆ ಜರುಗಲಿದೆ.