ಬೈತಡ್ಕ ಹಾಗೂ ಬೊಳುಬೈಲಿನಲ್ಲಿ ನಗದು ಕಳ್ಳತನ

0

ಎರಡು ದಿನದ ಅಂತರದಲ್ಲಿ ಹೋಟೆಲ್ ಹಾಗೂ ಅಂಗಡಿಗೆ ನುಗ್ಗಿದ ಕಳ್ಳರು

ಎರಡು ದಿನದ ಅಂತರದಲ್ಲಿ ರಾತ್ರಿಯ ವೇಳೆ ಬೀಗ ಮುರಿದು ಹೋಟೆಲ್ ಹಾಗೂ ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಕಳ್ಳತನ ಮಾಡಿದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ಹಾಗೂ ಬೊಳುಬೈಲಿನಲ್ಲಿ ಸಂಭವಿಸಿದೆ.

ಸೆ.26ರಂದು ರಾತ್ರಿ ಬೈತಡ್ಕದ ತಿರುವಿನ ಬಳಿಯಿರುವ ಹೋಟೆಲೊಂದರ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹದಿನೈದು ಸಾವಿರ ರೂ. ನಗದು ಹಾಗೂ ಹೋಟೆಲ್ ಮಾಲಕರ ಮೊಬೈಲ್ ಫೋನ್ ಕಳಳತನ ನಡೆಸಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಹೋಟೆಲ್ ಮಾಲಕರು ಸುಳ್ಯ ಪೊಲೀಸರಿಗೆ ವಿಷಯ ತಿಳಿಸಿರುವುದಾಗಿ ತಿಳಿದುಬಂದಿದೆ.

ಸೆ.27ರಂದು ರಾತ್ರಿ ಬೊಳುಬೈಲಿನ ಭಗವತಿ ಸ್ಟೋರ್ ನ ಶೆಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರಯರ್ ನಲ್ಲಿದ್ದ ಒಂಬೈನೂರು ರೂ. ನಗದು, ಕೊರಗಜ್ಜ ದೈವದ ಕಾಣಿಕೆ ಹುಂಡಿ ಸೇರಿದಂತೆ ವ್ಯಾಪಾರಕ್ಕಿರಿಸಿದ್ದ ಸಿಗರೇಟ್ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಭಗವತಿ ಸ್ಟೋರ್ ಮಾಲಕರು ದೂರು ದಾಖಲಿಸಿದ್ದು, ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.

ಎರಡು ದಿನಗಳ ಅಂತರದಲ್ಲಿ ಒಂದೇ ಏರಿಯಾದ ಎರಡು ಕಡೆ ಕಳ್ಳತನವಾಗಿದ್ದು, ಪೊಲೀಸರು ತನಖೆ ನಡೆಸುತ್ತಿದ್ದಾರೆ.