ಮಂಡೆಕೋಲು : ಶ್ರೀ‌ಮಹಾವಿಷ್ಣು ಸ್ತ್ರೀ ಶಕ್ತಿ ಗೊಂಚಲಿನ ಮಹಾಸಭೆ

0

ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಮಹಾವಿಷ್ಣು ಸ್ತ್ರೀ ಶಕ್ತಿ ಗೊಂಚಲಿನ ಮಹಾಸಭೆಯು ಗೊಂಚಲು ಅಧ್ಯಕ್ಷರಾದ ಶ್ರೀಮತಿ ಸುನಿತಾ ಇವರ ಅಧ್ಯಕ್ಷತೆಯಲ್ಲಿ ಮಂಡೆಕೋಲು ಸಹಕಾರಿ ಸದನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಗೊಂಚಲಿನ ಕಾರ್ಯದರ್ಶಿ ಶ್ರೀಮತಿ ಸರೋಜಿನಿ ಮಾವಂಜಿ ವಾರ್ಷಿಕ ವರದಿ ವಾಚಿಸಿ, ಜಮಾಖರ್ಚಿನ ವರದಿಯನ್ನು ಮಂಡಿಸಲಾಯಿತು.

2023 – 24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಸತ್ಯವತಿ, ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ ಪೇರಾಲು, ಉಪಾಧ್ಯಕ್ಷರಾಗಿ ಶ್ರೀಮತಿ ಶಶಿಕಲಾ ಹಾಗೂ ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ವಸಂತಿ ಯು.ಎಂ, ಕೋಶಾಧಿಕಾರಿಯಾಗಿ ಶ್ರೀಮತಿ ಚಂದ್ರಾವತಿ ಆಯ್ಕೆಯಾದರು.


2023 – 24ನೇ ಸಾಲಿಗೆ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿಯ ಪ್ರತಿನಿಧಿಯಾಗಿ ಶ್ರೀಮತಿ ಶಾರದಾ ರವರನ್ನು ಆಯ್ಕೆ ಮಾಡಲಾಯಿತು.
ಮಹಾಸಭೆಯ ಬಳಿಕ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಮೀಳಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯವರು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಾದ ಶ್ರೀಮತಿ ಶೈಲಜರವರು ಸ್ತ್ರೀ ಶಕ್ತಿ ಗೊಂಚಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಆದಾಯ ಉತ್ಪನ್ನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನುತಾ ಪಾತಿಕಲ್ಲುರವರು ಗೊಂಚಲಿನ ಉತ್ತಮ ಚಟುವಟಿಕೆಗಳನ್ನು ಶ್ಲಾಘಿಸಿದರು.

ಸುಳ್ಯ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಇದರ ಉಪಾಧ್ಯಕ್ಷೆಯಾದ ಶ್ರೀಮತಿ ವಸಂತಿಯವರು ಉಪಸ್ಥಿತರಿದ್ದರು. ಶ್ರೀಮತಿ ಶಾರದಾ ಸ್ವಾಗತಿಸಿ, ಶ್ರೀಮತಿ ಪವಿತ್ರ ಧನ್ಯವಾದ ಸಮರ್ಪಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ವಾರಿಜ ಬಿ ಮಂಡೆಕೋಲು, ಶ್ರೀಮತಿ ವಾರಿಜಾಕ್ಷಿ ಪಿ ಡಿ ಮೈಲೇಟಿಪಾರೆ, ಹಾಗೂ ಮೀನಾಕ್ಷಿ ಡಿ ಎಸ್ ರವರು ಉಪಸ್ಥಿತರಿದ್ದರು. ಮಹಾಸಭೆಯ ಸಂಧರ್ಭದಲ್ಲಿ ಆಟೂಟ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.