ಅನ್ಸಾರಿಯಾ ಮದ್ರಸ SBS ವಾರ್ಷಿಕ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ

0

ಸುಳ್ಯ ಸುನ್ನೀ ಬಾಲ ಸಂಘ ( SBS) ಇದರ ಅನ್ಸಾರಿಯಾ ಮದ್ರಸದ ವಾರ್ಷಿಕ ಸಭೆ 18-06-2023 ರಂದು ಮದ್ರಸ ಸಭಾಂಗಣದಲ್ಲಿ ನಡೆಯಿತು. ಮದ್ರಸ ಅಧ್ಯಾಪಕರಾದ ಸಯ್ಯಿದ್ ಹುಸೈನ್ ಸಅದಿ ತಂಙಳ್ ದುಅ ಮೂಲಕ ಚಾಲನೆ ನೀಡಿದರು. ಮುಖ್ಯೋಪಾಧ್ಯಾಯರಾದ ನೌಶಾದ್ ಮದನಿ ಅಧ್ಯಕ್ಷತೆಯಲ್ಲಿ ಹಂಝತುಲ್ ಕರ್ರಾರ್ ಮುಈನಿ ಉದ್ಘಾಟಿಸದರು. SBS ಮುದಬ್ಬಿರ್ ಅಬ್ದುಲ್ಲಾ ಹಿಮಮಿ ಸಖಾಫಿ ಮಕ್ಕಳಿಗೆ ಸಂಘಟನೆಯ ಮಹತ್ವ, ಕಲೆ ಸಾಹಿತ್ಯದ ಮೂಲಕ SBS ನಲ್ಲಿ ಕಾರ್ಯಾಚರಿಸುವ ಬಗ್ಗೆ ವಿಷಯ ಮಂಡಿಸಿದರು. ಬಳಿಕ 2023-24 ಸಾಲಿನ ನೂತನ SBS ನಾಯಕರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ರುಹೈದ್ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುದಸ್ಸಿರ್ ಕೋಶಾಧಿಕಾರಿಯಾಗಿ ನಿಹಾನ್ ಅಹ್ಮದ್ ಮತ್ತು ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಶಾಹಿದ್, ಮುಹಮ್ಮದ್ ಅಝಾದ್ ಹಾಗೂ ಮುಹಮ್ಮದ್ ಫಾಹಿಝ್ ಜತೆ ಕಾರ್ಯದರ್ಶಿಗಳಾಗಿ ಅಲ್ಫಾಝ್, ಮುಹಮ್ಮದ್ ತಮೀಮ್, ಮುಹಮ್ಮದ್ ಸ್ವಾಲಿಹ್ ರವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಅಲ್ಫಾಝ್ ಸ್ವಾಗತಿಸಿ ನೂತನ ಪ್ರ. ಕಾರ್ಯದರ್ಶಿ ಮುದಸ್ಸಿರ್ ವಂದಿಸಿದರು.