ಸುಳ್ಯ ಸೈಂಟ್ ಜೋಸೆಫ್ ಪ್ರೌಢ ಶಾಲೆಯ ಪ್ರಥಮ ಶಿಕ್ಷಕ ಪೋಷಕರ ಸಭೆ

0

ಸುಳ್ಯ ಸೈಂಟ್ ಜೋಸೆಫ್ ಪ್ರೌಢ ಶಾಲೆಯ ಪ್ರಥಮ ಶಿಕ್ಷಕ ಪೋಷಕರ ಸಭೆಯನ್ನು ಜೂನ್ 23ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ .ಫಾ.ವಿಕ್ಟರ್ ಡಿಸೋಜರವರು ವಹಿಸಿ , ಮಾತನಾಡುತ್ತಾ ವಿದ್ಯಾರ್ಥಿಗಳು ಶಿಸ್ತನ್ನು ತನ್ನ ಮನೆಯಿಂದಲೇ ರೂಡಿಸಿಕೊಳ್ಳಬೇಕು ಹಾಗೂ ಶಾಲೆಯ ಮುಂದಿನ ಯೋಜನೆಗಳನ್ನು ತಿಳಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಪ್ರೌಢ ಶಾಲಾ ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಅನಿತಾ ಮಸ್ಕರೆನಸ್ ರವರು ಶಾಲಾ ಶೈಕ್ಷಣಿಕ ವರದಿಯನ್ನು ಸಭೆಯ ಮುಂದಿಟ್ಟರು. ತದನಂತರ ಶಾಲಾ ಮುಖ್ಯೋಪಾಧ್ಯಾಯಿನಿ ಸಿ! ಬಿನೋಮರವರು ಶಾಲಾ ನಿಯಮಾವಳಿಗಳನ್ನು ತಿಳಿಸಿದರು.

ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 600 ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕಳೆದ ಸಾಲಿನ ಎಂಟನೇ ತರಗತಿಯ ಮೌಲ್ಯಾಂಕನ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ , ತೃತೀಯ ಸ್ಥಾನಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಹೆಸರುಗಳನ್ನು ಸಹ ಶಿಕ್ಷಕಿ ಉಷಾದೇವಿ ವಾಚಿಸಿದರು.ನಂತರ ಕಳೆದ ಶೈಕ್ಷಣಿಕ ವರ್ಷದ ಪೋಷಕ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಪೋಷಕರು ಶಾಲಾ ಪ್ರಗತಿಯ ಬಗ್ಗೆ ಸಲಹೆ ಸೂಚನೆಗಳನ್ನು ವ್ಯಕ್ತಪಡಿಸಿದರು. ಹಾಗೂ ಪ್ರಸಕ್ತ ಸಾಲಿಗೆ ನೂತನವಾಗಿ ಪೋಷಕ ಪ್ರತಿನಿಧಿಗಳ ಆಯ್ಕೆಯನ್ನು ಮಾಡಿ ಅವರನ್ನು ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಕಳೆದ ಸಾಲಿನ ಪೋಷಕರ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಕಣಪ್ಪಿಲ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸಹಶಿಕ್ಷಕಿ ಶ್ರೀಮತಿ ಚೇತನರವರು ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಸವಿತಾ ವಂದಿಸಿ, ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ ಹಾಗೂ ಶ್ರೀಮತಿ ಕಲಾವತಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಸಹಕರಿಸಿದರು.