ಆಲೆಟ್ಟಿ ಕ್ಲಸ್ಟರ್ ನ ಕಿರಿಯ,ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಒಟ್ಟು 1417 ವಿದ್ಯಾರ್ಥಿಗಳಿಗೆ ಸುಮಾರು ರೂ. 3.5 ಲಕ್ಷ ಮೌಲ್ಯದ 8500 ಕಿಂಗ್ ಸೈಜ್ ನೋಟ್ ಪುಸ್ತಕಗಳನ್ನು ಬೆಂಗಳೂರಿನ ಅಭ್ಯುದಯ ಮತ್ತು ಸುಂದರ ಭಾರತ ಟ್ರಸ್ಟ್ ವತಿಯಿಂದ ಜೂ.22 ರಂದು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೊಡುಗೆಯಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ
ಪ್ರೌಢ ಶಾಲಾ ಮಕ್ಕಳಿಗೆ ಆಯ್ದ ಓದುವ ಗ್ರಂಥಾಲಯ ಪುಸ್ತಕಗಳನ್ನು ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ವಹಿಸಿದ್ದರು. ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ,
ಸುಂದರ ಭಾರತ ಟ್ರಸ್ಟ್ ನ ಪ್ರತಾಪ್ ಪರಾಶರ, ಮಹಂತೇಶ್ , ಸುಮಂತ್, ಕೋಲ್ಚಾರು ಸ.ಉ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುದರ್ಶನ ಪಾತಿಕಲ್ಲು, ತಾಲೂಕಿನ 15 ಸರಕಾರಿ ಶಾಲೆಯ ಮುಖ್ಯ ಶಿಕ್ಷಕರು,
ಸಿ.ಅರ್.ಪಿ ,ಬಿ.ಆರ್.ಪಿ ಯವರುಉಪಸ್ಥಿತರಿದ್ದರು.