ಕಲ್ಲೇರಿ ಗುಳಿಗನ ಕಟ್ಟೆಯಲ್ಲಿ ಸಂಕ್ರಮಣ ಪೂಜೆ, ಅಗೇಲು ಸೇವೆ ಮಾ. 14ರಂದು ನಡೆಯಿತು.
ಕ್ಷೇತ್ರದ ಮೊಕ್ತೇಸರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು. ಲೋಕನಾಥ ರೈ ಎಣ್ಮೂರು ಪಟ್ಟೆ ಸೇವಾರ್ಥಿಗಳ ಪ್ರಾರ್ಥನೆ ಮಾಡಿದರು. ದೈವದ ಸೇವಕರಾದ ತಿಮ್ಮಪ್ಪ ಗೌಡ ಅರೆಂಬಿ, ವಸಂತ ಕುಕ್ಕಯಕೋಡಿ ಮತ್ತು ಬಾಲಕೃಷ್ಣ ಗುತ್ತಿಗೆ, ಸ್ಥಳೀಯರಾದ ನಾಗೇಶ್ ಆಳ್ವ ಕಟ್ಟಬೀಡು, ಅನೂಪ್ ಕುಮಾರ್ ಆಳ್ವ ಕಟ್ಟಬೀಡು, ರಾಮಕೃಷ್ಣ ಶೆಟ್ಟಿಯವರ ಕುಟುಂಬಸ್ಥರು ಸೇರಿದಂತೆ ಅನೇಕ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.