ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಿ.ಎಮ್. ಇ ಕಾರ್ಯಕ್ರಮದಡಿವಿಶ್ವ ನಿದ್ರಾ ದಿನದ ಕುರಿತಾದ ವಿಶೇಷ ಉಪನ್ಯಾಸ -ಸ್ಲೀಪ್ & ವೆಲ್ ನೆಸ್

0

ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಿ.ಎಮ್. ಇ (CME- Continuing Medical education )
ಕಾರ್ಯಕ್ರಮದಡಿ
ವಿಶ್ವ ನಿದ್ರಾ ದಿನದ ಕುರಿತಾದ ವಿಶೇಷ ಉಪನ್ಯಾಸ -ಸ್ಲೀಪ್ & ವೆಲ್ ನೆಸ್

ವಿಶ್ವ ನಿದ್ರಾ ದಿನವನ್ನು ಪ್ರತಿ ವರ್ಷ ಮಾರ್ಚ್ ಮೂರನೇ ಶುಕ್ರವಾರ ದಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾ. 14 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬೆರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯಲ್ಲಿ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಮಂಗಳೂರಿನ ಫಿಸಿಯೋಲಜಿ ವಿಭಾಗದ ಪ್ರೊಫೆಸರ್ ಡಾ. ಹರ್ಷ ಹಾಲಹಳ್ಳಿ, ಯೆನೆಪೋಯ ಮೆಡಿಕಲ್ ಕಾಲೇಜು ಮಂಗಳೂರಿನ ಸೈಕಿಯಾಟ್ರಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಾಜೇಶ್ ಎಂ, ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ಮಂಗಳೂರಿನ ಪಲ್ಮನರಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಗಿರಿಧರ್ ಬಿ.ಎಚ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ.ಆರ್ ಭಟ್, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸರ್ಫರಾಜ್ ಜಮಾಲ್, ಬಯೋಕೆಮಿಸ್ಟ್ರಿ ವಿಭಾಗದ ಪ್ರೊ. ಡಾ. ಶೃತಿ ರೈ, ಫಿಸಿಯೋಲಜಿ ವಿಭಾಗದ ಮುಖ್ಯಸ್ಥೆ ಡಾ. ಆರತಿ ರಾವ್, ಅಸೋಸಿಯೇಟ್ ಪ್ರೊಫೆಸರ್ ಡಾ. ದಾಮೋದರ್ ಡಿ ಉಪಸ್ಥಿತರಿದ್ದರು.
ಪ್ರಥಮ ಎಮ್. ಬಿ. ಬಿ ಎಸ್ ವಿದ್ಯಾರ್ಥಿನಿಯರಾದ ಅಕ್ಷತಾ ಕಾಮತ್ ಹಾಗೂ ಸುರಭಿ ನಾರಾಯಣ್ ಪ್ರಾರ್ಥಿಸಿದರು, ಡಾ. ಆರತಿ ರಾವ್ ಸ್ವಾಗತಿಸಿ ಡಾ. ದಾಮೋದರ್ ಡಿ ವಂದಿಸಿದರು, ಫಿಸಿಯೋಲಜಿ ವಿಭಾಗದ ಡಾ. ರಕ್ಷತಾ ರಮೇಶ್ ಹಾಗೂ ಡಾ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಯ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಸ್ಲೀಪ್ ಆಂಡ್ ವೆಲ್ ನೆಸ್ ಕುರಿತಾದ ವಿಶೇಷ ಉಪನ್ಯಾಸ ನಡೆಯಿತು.