ಬೆಳ್ಳಾರೆಯ ನೆಟ್ಟಾರಿನಲ್ಲಿರುವ ಅರ್ನಾಡಿ ರೈಸ್ ಮಿಲ್ ನ ಮಾಲಕರಾದ ಸದಾನಂದ ಭಟ್ ಅರ್ನಾಡಿ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಾ. 17ರಂದು ಮುಂಜಾನೆ ನಿಧನರಾದರು. ಇವರಿಗೆ 72 ವರ್ಷ ವಯಸ್ಸಾಗಿತ್ತು.
1983 ರಲ್ಲಿ ರೈಸ್ ಮಿಲ್ಲನ್ನು ಸ್ಥಾಪಿಸುವ ಮೂಲಕ ಭತ್ತ ಬೆಳೆಯುವ ರೈತರಿಗೆ ಪಾಲಿಗೆ ವರದಾನವಾದರು. ಭತ್ತದೊಂದಿಗೆ, ತೆಂಗಿನ ಎಣ್ಣೆ, ಸಾಂಬಾರ ಪದಾರ್ಥಗಳನ್ನು ಕನಿಷ್ಠ ದರದಲ್ಲಿ ಪುಡಿ ಮಾಡಿ ಕೊಡುವುದು ಇತ್ಯಾದಿ ಮಾಡುತ್ತಿದ್ದರು. ಇತ್ತೀಚಿಗೆ ಮಿಲ್ಲನ್ನು ನಡೆಸಲು ಲೀಸ್ ನಲ್ಲಿ ಮನೋಹರ ಗಾಣಿಗರಿಗೆ ನೀಡಿ ತಮ್ಮ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶಶಾಂಕರೊಂದಿಗೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಕಳೆದ ಶನಿವಾರ ಅಸೌಖ್ಯಕ್ಕೆ ಒಳಗಾದ ಇವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ನಿಧನರಾದರು. ಬಳಿಕ ಅವರ ಮೃತ ದೇಹವನ್ನು ಹುಟ್ಟೂರು ಅರ್ನಾಡಿಗೆ ತಂದು ಇಂದು ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೃದು ಸ್ವಭಾವದ ಸದಾನಂದ ಭಟ್ಟರು ಎಲ್ಲರಿಗೂ ಆತ್ಮೀಯರಾಗಿದ್ದರು. ಮೃತರು ಪತ್ನಿ ಶ್ರೀಮತಿ ಶಂಕರಿ, ಪುತ್ರ ಶಶಾಂಕ ಅರ್ನಾಡಿ, ಪುತ್ರಿ ಶ್ರೀಮತಿ ಪ್ರಿಯಾಂಕಾ ಪ್ರಶಾಂತ್ ಕೋರಿಕ್ಕಾರ್, ಸಹೋದರರಾದ ಕೇಶವ ಭಟ್ ಅರ್ನಾಡಿ ಬೆಂಗಳೂರು, ಸತ್ಯನಾರಾಯಣ ಭಟ್ ಅರ್ನಾಡಿ ಬೆಂಗಳೂರು, ಶಿವರಾಮ ಭಟ್ ಅರ್ನಾಡಿ ಬೆಂಗಳೂರು, ಸಹೋದರಿ ಶ್ರೀಮತಿ ಸುಬ್ಬಮ್ಮ ಪ್ರಭಾಕರ ಕೊಲ್ಲಮೊಗ್ರ ಕಟ್ಟ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.