Home Uncategorized ಬಳ್ಪದ ಕುಮನಮಾಳ್ಯದಲ್ಲಿ ದೈವಗಳ ನೇಮೋತ್ಸವ

ಬಳ್ಪದ ಕುಮನಮಾಳ್ಯದಲ್ಲಿ ದೈವಗಳ ನೇಮೋತ್ಸವ

0

ಬಳ್ಪ ಗ್ರಾಮದ ಕುಮನಮಾಳ್ಯ ಗ್ರಾಮ ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ರಾಜನ್ ದೈವ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕುಂಭಾಭಿಷೇಕ ಹಾಗೂ ಕಾಲಾವಧಿ ನೇಮೋತ್ಸವ ಮಾ. 18ರ ತನಕ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.


ಮಾ.‌17ರಂದು ಸಂಜೆ ದೈವಗಳ ಭಂಡಾರ ತೆಗೆದು, ಶ್ರೀ ಉಳ್ಳಾಕುಲು, ಶ್ರೀ ಕುಮಾರ, ಮದಿಮಾಲು, ದೈವಗಳ ನೇಮೋತ್ಸವ ನಡೆಯಿತು. ಬೆಳಿಗ್ಗೆ ವಿಷ್ಣುಮಂಗಲ‌ ಶ್ರೀ ಧನ್ವಂತರಿ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.


ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ರುದ್ರಚಾಮುಂಡಿ,
ವ್ಯಾಘ್ರ ಚಾಮುಂಡಿ, ಮಲೆಚಾಮುಂಡಿ, ಕಲ್ಲುರ್ಟಿ ಪಂಜುರ್ಲಿ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

ಮಾ. 18ರಂದು ಬೆಳಿಗ್ಗೆ ಪುರುಷರಾಯ, ಬೇಡವ ದೈವಗಳ ನೇಮೋತ್ಸವ, ಬಳಿಕ ಶ್ರೀ ಶಿರಾಡಿ
ರಾಜನ್ ದೈವದ ನೇಮೋತ್ಸವ, ಹರಿಕೆ ಕಾಣಿಕೆ, ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಮಾರಿಕಳಕ್ಕೆ ಹೋಗುವುದು ನಡೆಯಲಿದೆ.

NO COMMENTS

error: Content is protected !!
Breaking