ಕಲ್ಲಪಳ್ಳಿಯಲ್ಲಿ ಎನ್.ಎಂ.ಸಿ.ಯ ಎನ್.ಎಸ್.ಎಸ್. ಶಿಬಿರ. ಸಮಾರೋಪ

0

ನಾಯಕರು ತಾನು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸಬೇಕು : ಲ. ಎಂ. ಬಿ. ಸದಾಶಿವ

ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಈ ಯೋಜನೆಯು ಪರಿಸರದೊಂದಿಗೆ ಬೆರೆಯುವಂತ ಅವಕಾಶವನ್ನು ಕಲ್ಪಿಸಿದೆ. ವಿದ್ಯಾರ್ಥಿಗಳು ಬದಲಾವಣೆಗೆ ಒಗ್ಗಿಕೊಂಡು ಹೊಂದಾಣಿಕೆಯಿಂದ ಬದುಕಬೇಕು. ನಮ್ಮನ್ನು ನಾವು ತಿಳಿದುಕೊಳ್ಳಲು ಮೊದಲು ಇತರರ ಸೇವೆ ಮಾಡಬೇಕು. ನಮ್ಮಲ್ಲಿನ ಬಲ, ದೌರ್ಬಲ್ಯ ತಿಳಿದು ಆತ್ಮವಿಶ್ವಾಸವನ್ನು ತುಂಬುವಂತ ಕೆಲಸ ಎನ್ಎಸ್ಎಸ್ ಮಾಡುತ್ತದೆ ಎಂದು ಸುಳ್ಯದ ಎಂ. ಬಿ. ಫೌಂಡೇಶನ್ ನ ಅಧ್ಯಕ್ಷರಾದ ಲ. ಎಂ. ಬಿ ಸದಾಶಿವ ಹೇಳಿದರು.

ಅವರು ಜೂ. 25ರಂದು ಕಲ್ಲಪಳ್ಳಿಯ ಪೆರುಮುಂಡದಲ್ಲಿ ಆದರ್ಶ ಕ್ರೀಡಾ ಸಂಘದ ಆಶ್ರಯದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣದಲ್ಲಿ ಹೇಳಿದರು.

ಎನ್ಎಸ್ಎಸ್ ಶಿಬಿರವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಮಾಡಲಾಗುವುದರಿಂದ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮೊಳಕೆ ಒಡೆಯುತ್ತದೆ. 25 ವರುಷಗಳಿಂದ ಕಾಲೇಜಿನ ಎನ್ಎಸ್ಎಸ್ ಘಟಕ ಅಧಿಕಾರಿಯಾಗಿ ಸಾಕಷ್ಟು ಶಿಬಿರಾರ್ಥಿಗಳಿಗೆ ನಿಸ್ವಾರ್ಥ ಸೇವೆಯನ್ನು ನೀಡುವ ಮುಖಾಂತರ ಉತ್ತಮ ನಾಯಕರನ್ನು ಬೆಳೆಸುವಲ್ಲಿ ಕಾರಣರಾದ ಸಂಜೀವ ಕುದ್ಪಾಜೆ ಅವರ ಕೆಲಸ ಶ್ಲಾಘನೀಯ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಪಾರ್ವತಿ ಅಕ್ಷಯ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ವಿಚಾರಗಳನ್ನು ಕಲಿಯುವಂತಹ ಅವಕಾಶವಿದೆ. ಹೊಸ ಜನರೊಂದಿಗೆ ಬೆರೆತು ಕ್ರಿಯಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಶಿಬಿರವು ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವಂತ ಕೆಲಸ ಮಾಡುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ಎಂ. ಎಂ. ಮಾತನಾಡಿ, ಎನ್ಎಸ್ಎಸ್ ಶಿಬಿರದಿಂದ ಶಿಬಿರಾರ್ಥಿಗಳಲ್ಲಿ ಪರಿಸರದ ಜನರೊಂದಿಗೆ ಉತ್ತಮವಾಗಿ ಬೆರೆತು ಇಲ್ಲಿನ ಸಂಸ್ಕೃತಿ, ಸಂಸ್ಕಾರ ಕಲಿತುಕೊಳ್ಳುವಂಥ ಅವಕಾಶ ಸಿಕ್ಕಿರುತ್ತದೆ. ನಾವು ಮಾಡುವಂತ ಕೆಲಸದಲ್ಲಿ ಆಸಕ್ತಿ ಮುಖ್ಯ ಎಂದು ಹೇಳಿ, ಶಿಬಿರ ಉತ್ತಮವಾಗಿ ನಡೆಯಲು ಕಾರಣರಾದವರನ್ನು ಸ್ಮರಿಸಿದರು.

ವೇದಿಕೆಯಲ್ಲಿ ಕಲ್ಲಪಳ್ಳಿ ಮಾತಾ ಅಮೃತಾನಂದಮಯಿ ಸೇವಾ ಸಂಘದ ಕನ್ವೀನರ್ ನಂದಕುಮಾರ್ ಬಾಟೋಳಿ, ಪೆರುಮುಂಡ – ಕಲ್ಲಪಳ್ಳಿ ಆದರ್ಶ ಸಾಂಸ್ಕೃತಿ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಸೃಜಿತ್ ಪೆರುಮುಂಡ, ಸ್ವಾಗತ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಪೆರುಮುಂಡ, ಪೆರುಮುಂಡ -ಕಲ್ಲಪಳ್ಳಿ ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಸ್ಥಾಪಕ ಸದಸ್ಯ ಬಾಲಚಂದ್ರ ಪಿ.ವಿ, ಪೆರುಮುಂಡ – ಕಲ್ಲಪಳ್ಳಿ ಆದರ್ಶ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ, ಎನ್‌.ಎಸ್.ಎಸ್ ಘಟಕದ ಯೋಜನಾಧಿಕಾರಿಗಳಾದ ಸಂಜೀವ ಕುದ್ಪಾಜೆ ಎನ್ಎಸ್ಎಸ್ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶ್ರೀಮತಿ ಚಿತ್ರಲೇಖ ಸ್ವಾಗತಿಸಿ, ಶಿಬಿರಾರ್ಥಿ ಸಂಜಯಾ ಎಸ್ ವಂದಿಸಿದರು. ಶಿಬಿರಾರ್ಥಿಗಳು ಪ್ರಾರ್ಥಸಿದರು. ಶಿಬಿರಾರ್ಥಿಗಳಾದ ಸುಶ್ಮಿತಾ ವರದಿ ವಾಚಿಸಿ, ನಿಶ್ಮ ಡಿ. ಸಿ ಉಗ್ರಾಣದ ವರದಿ ವಾಚಿಸಿದರು. ದೇವಿಕಾ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ


25 ವರುಷಗಳಿಂದ ಎನ್. ಎಸ್. ಎಸ್ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುವ ಪ್ರೊ. ಸಂಜೀವ ಕುದ್ಪಾಜೆಯವರಿಗೆ ನೆಹರು ಮೆಮೋರಿಯಲ್ ಕಾಲೇಜಿನ ಪರವಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಪರವಾಗಿ, ಪೆರುಮುಂಡ ಕಲ್ಲಪಳ್ಳಿ ಆದರ್ಶ ಸಾಂಸ್ಕೃತ ಮತ್ತು ಕ್ರೀಡಾ ಸಂಘದ ವತಿಯಿಂದ, ರಾಷ್ಟ್ರೀಯ ಸೇವಾ ಯೋಜನೆಯ ಹಳೆಯ ಶಿಬಿರಾರ್ಥಿಗಳಿಂದ ಹಾಗೂ ಸುಳ್ಯದ ಎಂ. ಬಿ ಫೌಂಡೇಶನ್ ಅಧ್ಯಕ್ಷ, ಲ. ಎಂ. ಬಿ. ಸದಾಶಿವ ಅವರು ಸನ್ಮಾನಿಸಿದರು. ಹಾಗೂ ಕಳೆದ 22 ವರುಷಗಳಿಂದ ಅಡುಗೆ ತಯಾರಿಸುತ್ತಿದ್ದ ಸುಬ್ರಹ್ಮಣ್ಯ ಭಟ್ ಅಲೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ನೀರಿನ ಟ್ಯಾಕ್ ಕೊಡುಗೆ


ಎನ್. ಎಸ್. ಎಸ್ ಘಟಕದ ವತಿಯಿಂದ ಪೆರುಮುಂಡ – ಕಲ್ಲಪಳ್ಳಿ ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಕ್ಕೆ 2 ಸಾವಿರ ಲೀ. ನೀರಿನ ಟ್ಯಾಂಕ್ ಕೊಡುಗೆ ನೀಡಲಾಯಿತು.