ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಸಭೆ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆಯು ವಿಷ್ಣು ಸರ್ಕಲ್ ಬಳಿ ಸಂಘದ ಕಛೇರಿಯ ಸಭಾಭವನದಲ್ಲಿ ನಡೆಯಿತು.

ಸಭೆ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಮಲ್ಲೇಶ್ ಬೆಟ್ಟಂಪಾಡಿ ವಹಿಸಿದ್ದರು.
ಕಾರ್ಯದರ್ಶಿ ಜನಾರ್ಧನ ದೋಳ ವರದಿ ವಾಚಿಸಿದರು. ಕೋಶಾಧಿಕಾರಿ ಗೋಪಾಲ್ ನಡುಬೈಲ್ ಸ್ವಾಗತಿಸಿದರು. ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.


ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಗ್ಯಾರೇಜ್ ಉದ್ಯೋಗಿಗಳ ಮಕ್ಕಳಿಗೆ ಬರೆಯುವ ಪುಸ್ತಕ ಕೊಟ್ಟು ಸಹಕರಿಸಿದ ಸತೀಶ್ ಕಾನತ್ತಿಲ ಅವರನ್ನು ಗೌರವಿಸಲಾಯಿತು.