ಆಲೆಟ್ಟಿ ರಸ್ತೆಯಲ್ಲಿ ನ.4 ರಂದು ಸಂಭವಿಸಿದ ಕಾರು ಮತ್ತು ರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋಪಾಲ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು .
ಮೃತರು ಪತ್ನಿ ಶ್ರೀಮತಿ ಜಯಂತಿ ಹಾಗೂ ಇಬ್ಬರು ಪುತ್ರಿಯರಾದ ಕು.ಶರಣ್ಯ ಮತ್ತು ಕು.ಭೂಮಿಕಾ ಮತ್ತು ಸಹೋದರರನ್ನು, ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಸುಳ್ಯದಲ್ಲಿ ಕಳೆದ 8 ವರ್ಷಗಳಿಂದ ಅಟೋ ಚಾಲಕರಾಗಿದ್ದರು.ಸುಳ್ಯ ಜೂನಿಯರ್ ಕಾಲೇಜ್ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.