ಐವರ್ನಾಡು ಗ್ರಾ.ಪಂ.ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

0

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ಇಂದು ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿಯ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ವಠಾರ ಹಾಗೂ ಮುಖ್ಯ ರಸ್ತೆ ಯ ಬದಿಯಲ್ಲಿ ಮತ್ತು ಐವರ್ನಾಡು ಗ್ರಾಮ ಪಂಚಾಯತ್ ವಠಾರದಿಂದ ಮರ್ವತ್ತಡ್ಕ ವರೆಗೆ ನಡೆಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಹಾಗೂ ಪಂಚಾಯತ್ ಸಿಬ್ಬಂದಿಗಳು, ಮಂಜುಶ್ರೀ ಗೆಳೆಯರ ಬಳಗ (ರಿ) ಪಾಲೆಪ್ಪಾಡಿಯ ಅಧ್ಯಕ್ಷರು, ಸದಸ್ಯರು ಹಾಗೂ ಊರಿನ ಪ್ರಮುಖರು ಭಾಗವಹಿಸಿದ್ದರು.