ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಡಿ.14 ರಂದು ನಿಧನರಾದ ವೆಂಕಪ್ಪ ಗೌಡ ಭರ್ಜರಿಗುಂಡಿ ಇವರ ಮರಣ ಸಾಂತ್ವನ ನಿಧಿ ರೂ.11000/- ವನ್ನು ಪತ್ನಿ ರುಕ್ಮಿಣಿ ರವರಿಗೆ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಗಂಗಾಧರ್ ಪಿ.ಎಸ್, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಪುತ್ರ ಪ್ರದೀಪ್ ಉಪಸ್ಥಿತರಿದ್ದರು.