ಹರಿಹರ ಪಲ್ಲತಡ್ಕ ಗ್ರಾಮ ಸಭೆ

0

ಕುಡಿಯುವ ನೀರು, ಸರ್ಕಾರಿ ಜಾಗ ಕಾದಿರುಸುವುದು, ಕಸ ವಿಲೇವಾರಿ ಬಗ್ಗೆ ಚರ್ಚೆ

ಲಂಚ ಭ್ರಷ್ಟಾಚಾರ ವಿರೋಧಿ ಫಲಕದ ಹಸ್ತಾಂತರ, ಪ್ರತಿಜ್ಞೆ

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಗ್ರಾಮ ಸಭೆ ಇಂದು ನಡೆಯಿತು. ಗ್ರಾಮ ಸಭೆಯಲ್ಲಿ
ಕುಡಿಯುವ ನೀರು, ಸರ್ಕಾರಿ ಜಾಗ ಕಾದಿರುಸುವುದು, ಕಸ ವಿಲೇವಾರಿ ಬಗ್ಗೆ ಸಮರ್ಪಕ ವ್ಯವಸ್ಥೆ ಇಲ್ಲದ ಬಗ್ಗೆ ಚರ್ಚೆ, ಮೋರಿ ರಚಿನೆ ಬಗ್ಗೆ, ಸಂಜೀವಿನಿಯ ಕೃಷಿ ಸಖಿ ಹಾಗೂ ಪಶು ಸಖಿ ನೇಮಕದ ಬಗ್ಗೆ ಚರ್ಚೆ ನಡೆಯಿತು.


ಗ್ರಾಮ ಸಭೆಯಲ್ಲಿ
ಸುದ್ದಿ ಮಾದ್ಯಮ ದ ಸಹಯೋಗದಲ್ಲಿ ನಡೆಯುವ ಲಂಚ ಭ್ರಷ್ಟಾಚಾರ ವಿರೋಧಿ ಫಲಕದ ಹಸ್ತಾಂತರ ಹಾಗೂ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ಜರಗಿತು.


ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ವಿಜಯಕುಮಾರ್ ಅಂಙಣ, ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂದು .ಪಿ, ಪದ್ಮಾವತಿ ಕೆ, ಶಿಲ್ಪಾ ಕೊತ್ನಡ್ಕ, ಪಿಡಿಒ ಪುರುಷೋತ್ತಮ ಮಣಿಯಾನ ಉಪಸ್ಥಿತರಿದ್ದರು. ಬಿ.ಐ.ಆರ್‌.ಟಿ.ಸಿ ಯ ಅಧಿಕಾರಿ ದೇವರಾಜ್ ಮುತ್ಲಾಜೆ ನೋಡೆಲ್ ಅಧಿಕಾರಿಯಾಗಿ ದ್ದರು.

ಪಿಡಿಒ ಪುರುಷೋತ್ತಮ ಮಣಿಯಾನ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು. ಗ್ರಾ.ಪಂ ಸಿಬ್ಬಂದಿಗಳಾದ ಇಂದಿರಾಂಭ ಮತ್ತು ಜಯಕುಮಾರ್ ವರದಿ ವಾದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೇಲ್ವಿಚಾರಕಿ ವಿಜಯ ಜೆ.ಡಿ, ಸುಬ್ರಹ್ಮಣ್ಯ ಮೆಸ್ಕಾಂ ಕಿ.ಇಂ. ಹರೀಶ್, ತೋಟಗಾರಿಕಾ ಇಲಾಖೆಯ ಮಧುಶ್ರೀ, ಹಿರಿಯ ಪಶುವೈದ್ಯ ಪರಿವೀಕ್ಷಕ ವಿಶ್ವನಾಥ, ಕೃಷಿ ಇಲಾಖೆಯ ಸುಹಾಸ್, ಆರೋಗ್ಯ ಇಲಾಖೆಯ ಮೋಹಿನಿ, ಗ್ರಾಮ ಆಡಳಿತಾಧಿಕಾರಿ ಮಧುಕುಮಾರ್, ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ, ಅರಣ್ಯ ಇಲಾಖೆಯ ಮನೋಜ್, ಪೊಲೀಸ್ ಇಲಾಖೆಯ ಕಿರಣ್, ಸಂಜೀವಿನಿ ಎನ್. ಆರ್.ಎಲ್.ಎಂ ವೇದಾವತಿ ಇಲಾಖೆಯ ಮಾಹಿತಿ ನೀಡಿದರು.