ನಿವ್ವಳ ಲಾಭ 76.95 ಲಕ್ಷ, ಡಿವಿಡೆಂಡ್ – ಶೇ 11% ಘೋಷಣೆ
ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.21 ರಂದು ಸಂಘದ ಅಧ್ಯಕ್ಷ ಕರುಣಾಕರ ಹೆಚ್ ರವರ ಅಧ್ಯಕ್ಷತೆಯಲ್ಲಿ ಸಂಘದ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
ಆರಂಭದಲ್ಲಿ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನಕರ ಎ. ರವರು ವಾರ್ಷಿಕ ವರದಿ ವಾಚಿಸಿದರು.
ಪ್ರಸ್ತುತ ಸಂಘದಲ್ಲಿ ಎ ತರಗತಿಯ 2963 ಸದಸ್ಯರ ಸಂಖ್ಯಾಬಲ ಹೊಂದಿದ್ದು ರೂ. 4.18 ಕೋಟಿ ಪಾಲು ಬಂಡವಾಳವನ್ನು ಕ್ರೋಢಿಕರಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ 8.48% ಠೇವಣಾತಿ ವೃದ್ಧಿಯಾಗಿದೆ. ದುಡಿಯುವ ಬಂಡವಾಳ ವರ್ಷಾಂತ್ಯಕ್ಕೆ 50.83 ಕೋಟಿ ಇದೆ. ಒಟ್ಟು ಪ್ರಸ್ತುತವಾಗಿ ರೂ. 36.06 ಕೋಟಿ ಸಾಲವನ್ನು ವಿತರಿಸಲಾಗಿದೆ. ರೂ.76,95,293.10 ಲಕ್ಷದಷ್ಟು ಲಾಭ ಗಳಿಸಿದ್ದು ಸದಸ್ಯರಿಗೆ ಶೇ.11% ಡಿವಿಡೆಂಡ್ ನೀಡುವುದಾಗಿ ಮಹಾಸಭೆಯಲ್ಲಿ ಅಧ್ಯಕ್ಷ ರು ಘೋಷಿಸಿದರು.
ದೀರ್ಘಾವಧಿ ಸಾಲ ವಿತರಣೆ ಕಡಿಮೆಯಾಗಿದೆ. ಸದಸ್ಯರಿಗೆ ಹೆಚ್ಚುವರಿಯಾಗಿ ನೀಡುವಂತಾಗಬೇಕೆಂದು ಒತ್ತಾಯಿಸಲಾಯಿತು.
ನಿಬಡ್ಡಿ ಸಾಲ ವಿತರಣೆಯಲ್ಲಿ 3 ಲಕ್ಷ ಇರುವುದನ್ನು 5 ಲಕ್ಷಕ್ಕೆ ಏರಿಸುವಂತೆ ಚರ್ಚಿಸಲಾಯಿತು.
ಶಿಕ್ಷಣ ನಿಧಿಯಿಂದ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸುವುದನ್ನು ವಿಸ್ತರಿಸುವ ಬಗ್ಗೆ ಹಾಗೂ ಸಿಬ್ಬಂದಿಗಳಿಬ್ಬರನ್ನು ಪದೋನ್ನತಿಗೊಳಿಸುವ ಕುರಿತು ಮಹಾಸಭೆಯಲ್ಲಿ ಅಧ್ಯಕ್ಷರು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಸಹಕಾರ ಶಿಕ್ಷಣ ನಿಧಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಮಹಾ ಪ್ರಸ್ಥಾನ ನಿಧಿಗೆ ರೂ.10 ಸಾವಿರ ನೀಡಿದ ದಾನಿಗಳಾದ ಶ್ರೀಮತಿ ಚಂದ್ರಾವತಿ ರಾಮಣ್ಣ ಗೌಡ ಕುಂಚಡ್ಕ, ಎನ್.ಎ.ಸುಂದರ ಸ್ಮರಣಾರ್ಥ ಎನ್.ಎ.ಜಯರಾಮ ರವರನ್ನು ಗೌರವಿಸಲಾಯಿತು.
ಇತ್ತೀಚೆಗೆ ಕೋಲ್ಚಾರು ಸ.ಉ.ಹಿ.ಪ್ರಾಥಮಿಕ ಶಾಲೆಗೆ ಅತ್ಯುತ್ತಮ ಕನ್ನಡ ಶಾಲೆ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ,ಎಸ್.ಡಿ.ಎಂ.ಸಿ.
ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಸಹ ಶಿಕ್ಷಕಿ ಜಲಜಾಕ್ಷಿ ಯವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನಿರ್ದೇಶಕ ರಾದ ಶ್ರೀಪತಿ ಭಟ್ ಮಜಿಗುಂಡಿ, ಜಯಪ್ರಕಾಶ್ ಕುಂಚಡ್ಕ, ಹರೀಶ್ ಕೆ.ಜೆ, ಸುದರ್ಶನ ಪಿ.ಎಸ್, ಸೂರ್ಯನಾರಾಯಣ ನಾಯಕ್, ಗಂಗಾಧರ ಎನ್.ಎ, ಶಿವರಾಮ ನಾಯ್ಕ್, ತಂಗವೇಲು ಕೆ, ಶ್ರೀಮತಿ ಶ್ರೀದೇವಿ, ಶ್ರೀಮತಿ ವೇದಾವತಿ ಎ.ಎಸ್ ಉಪಸ್ಥಿತರಿದ್ದರು. ಸಿಬ್ಬಂದಿ ಪ್ರವೀಣ್ ಪ್ರಾರ್ಥಿಸಿದರು. ನಿರ್ದೇಶಕ ಶ್ರೀಪತಿ ಭಟ್ ಮಜಿಗುಂಡಿ ವಂದಿಸಿದರು. ಸಭಾಭವನದಲ್ಲಿ ಕಿಕ್ಕಿರಿದು
ಸಂಘದ ಸದಸ್ಯರು ಹಾಜರಿದ್ದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.