ದೊಡ್ಡತೋಟ – ಮರ್ಕಂಜ ರಸ್ತೆಯ ಹೈದಂಗೂರುವಿನಲ್ಲಿ‌ ರಾತ್ರಿ ವ್ಯಾನ್ ಗೆ ಅಡ್ಡವಾದ ಕಾಡಾನೆ

0

ಕಾಡಾನೆ ರಸ್ತೆ ಬಿಟ್ಟು ತೆರಳುವವರೆಗೆ ಕಾದು ನಿಂತ ಚಾಲಕ

ರಾತ್ರಿ ವೇಳೆ ಸಂಚರಿಸುವ ವಾಹನ ಚಾಲಕರೇ… ಎಚ್ಚರ…

ಉಬರಡ್ಕ ಭಾಗದಲ್ಲಿದ್ದ ಕಾಡಾನೆಗಳು ಇದೀಗ ಹೈದಂಗೂರು – ಕೊರತ್ತೋಡಿ ಭಾಗದಲ್ಲಿ ಬೀಡು ಬಿಟ್ಟಿದ್ದು, ನ.17ರ ಸಂಜೆ ರಸ್ತೆ ಬದಿಗೆ ಬಂದು, ಹೈದಂಗೂರು ಕಾಡಿನತ್ತ ಹೆಜ್ಜೆ ಹಾಕಿತ್ತು. ಅದೇ ದಿನ ರಾತ್ರಿ ಎರಡು ದಿನದ ಹಿಂದೆ ಮೈಸೂರು ಕಡೆಗೆ ಬಾಡಿಗೆ ಹೋಗಿದ್ದ ಯಶಸ್ವಿ ವ್ಯಾನ್ ಪ್ರಯಾಣಿಕರನ್ನು ಬಿಟ್ಟು, ರಾತ್ರಿ 3 ಗಂಟೆಗೆ ಮರಳಿ ಮರ್ಕಂಜ ಬಳಿಯ ಮಿತ್ತಡ್ಕದ ತನ್ನ ಮನೆಗೆ ಬರುತ್ತಿದ್ದಾಗ ಹೈದಂಗೂರು ರಸ್ತೆಯ ಮಧ್ಯೆ 2 ಕಾಡಾನೆಗಳು ಎದುರಾದುವು. ಆ ಸಂದರ್ಭ ವ್ಯಾನ್ ಮ್ಹಾಲಕ ನಾಗರಾಜ ರವರು ವ್ಯಾನನ್ನು ಸ್ವಲ್ಪ ಹೊತ್ತು ನಿಲ್ಲಿಸದರೆಂದೂ ಬಳಿಕ ಕಾಡಾನೆಗಳು ರಸ್ತೆಯಿಂದ ಕಾಡೊಳಗೆ ಇಳಿದು ಹೋದ ಬಳಿಕ ನಾಗಾರಾಜರು ತಮ್ಮ ವಾಹನವನ್ನು‌ ಚಾಲಾಯಿಸಿಕೊಂಡು ಹೋದರೆನ್ನಲಾಗಿದೆ.

ಆ ಭಾಗದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಬೃಹತ್ ಪೊದೆಗಳು ಆವರಿಸಿರುವ ಕಾರಣ ಕಾಡಾನೆಗಳು ರಸ್ತೆಯಂಚಿಗೆ ಬಂದರೂ ವಾಹನ ಸವಾರರಿಗೆ ಗೋಚರಿಸುವುದು ಕಷ್ಟ. ಹೀಗಾಗಿ ರಾತ್ರಿ ವೇಳೆ ಸಂಚರಿಸುವಾಗ ವಾಹನ ಸವಾರರು ಎಚ್ಚರ ವಹಿಸಬೇಕಾಗಿದೆ.