ಸುಳ್ಯದ ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭ ನ.19ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ತಾಲೂಕು ರೆಡ್ ಕ್ರಾಸ್ ಘಟಕಾಧಿಕಾರಿ ಮತ್ತು ನೆಹರು ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಂಜೀವ ಕುದ್ಪಾಜೆ ಉದ್ಘಾಟನೆ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಉದಯಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಪ್ರೊ ದಾಮೋದರ ಗೌಡ ಕೆ.ವಿ., ಎರಡೂ ಘಟಕಗಳ ಘಟಕಾಧಿಕಾರಿಗಳಾದ ಶ್ರೀಮತಿ ನಯನ ಪಿ.ಯು., ಶ್ರೀಮತಿ ಅರ್ಚನ ಆರ್. ರೈ, ವಿದ್ಯಾರ್ಥಿ ನಾಯಕರಾದ ನಾಚಪ್ಪ ಸಿ.ಎನ್., ಮತ್ತು ವನ್ಯಶ್ರೀ ಹೆಚ್. ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿನಿ ಸಮೀಕ್ಷ ಕಾರ್ಯಕ್ರಮ ನಿರೂಪಿಸಿದರು.