ಐವರ್ನಾಡು : ಪೋಷಣ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಐವರ್ ನಾಡು ಗ್ರಾಮದ ಅಂಗನವಾಡಿ ಕೇಂದ್ರಗಳು, ಕೃಷಿ ಪರಿಷತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘ ಐವರ್ನಾಡು, ಗ್ರಾಮ ಪಂಚಾಯತ್ ಇವರ್ನಾಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಪಂಚಮುಖಿ ಶ್ರೀ ಶಕ್ತಿ ಗೊಂಚಲು ಸಮಿತಿ ಐವರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ ಮಾಸಾಚರಣೆ ಮತ್ತು ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಸೆ.20 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು. ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ರೀಮತಿ ಶೈಲಜಾ ಬಿ . ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಲಯ ಮೇಲ್ವಿಚಾರಕ್ಕೆ ಉಷಾ ಪ್ರಸಾದ್ ರೈ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂಪ್ರಸಾದ್ ರವರು ಕಾರ್ಯಕ್ರಮ ಮಾಡುವುದರ ಪರಿಣಾಮ ಉತ್ತಮ ರೀತಿಯಲ್ಲಿ ಬರಬೇಕು , ಸುಪೋಷಿತ ಗ್ರಾಮ ಆಗಬೇಕು ಎಂದು ಶುಭ ಹಾರೈಸಿದರು. ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸಿಬ್ಬಂದಿ ಗೋಪಿನಾಥ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿಶ್ರೀಮತಿ ಜಯಂತಿ ಇವರು ಹಾಜರಿದ್ದು ಶುಭ ಹಾರೈಸಿದರು ಗ್ರಾಮ ಆರೋಗ್ಯ ಅಧಿಕಾರಿ ರೇಷ್ಮಾ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಾಲ್ಯದ ಮಕ್ಕಳ ಆರೈಕೆ ಮತ್ತು ರಕ್ತ ಹೀನತೆ, ಸ್ವಚ್ಛತೆ ಬಗ್ಗೆ ಡಾಕ್ಟರ್ ವರ್ಷಿಣಿ ವಿಜಯ ಕ್ಲಿನಿಕ್ ಬೆಳ್ಳಾರೆ ಇವರು ಮಾಹಿತಿ ನೀಡಿದರು. ಮಹಿಳೆಯರ ರಕ್ತ ತಪಾಸಣೆ ಮಾಡಲಾಯಿತು, ಪೌಷ್ಟಿಕ ಆಹಾರ ಪ್ರದರ್ಶನ ಮಾಡಲಾಯಿತು, ಮಹಿಳೆಯರಿಗೆ ಪೌಷ್ಟಿಕ ಆಹಾರ ತಯಾರಿಸುವ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳನ್ನು ಮಾಡಿ ಬಹುಮಾನಗಳನ್ನು ವಿತರಿಸಲಾಯಿತು. ಆಹಾರದ ಪಿರಾಮಿಡ್ ಒಂದು ಆಕರ್ಷಣೀಯವಾಗಿತ್ತು.


ಬಳಿಕ ಸಾಮೂಹಿಕ ಸೀಮಂತ ಕಾರ್ಯಕ್ರಮವು ನಡೆಯಿತು.
ಲೀಲಾವತಿ, ಸ್ವಾತಿ, ಜ್ಯೋತಿ ಇವರು ಕಾರ್ಯಕ್ರಮ ಕ್ಕೆ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ರೋಹಿತಾಕ್ಷಿ ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು. .ಮೀನಾಕ್ಷಿ ಇವರು ಸ್ವಾಗತಿಸಿದರು. ಶಿವ ಶಾಂತಿ ತಾಲಿಪಡಿ ಅಂಗನವಾಡಿ ಕಾರ್ಯಕರ್ತೆ ಎಲ್ಲರಿಗೂ ವಂದಿಸಿದರು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಹಕರಿಸಿದರು.