ಪೊಳೆಂಜ -ಕರಿಕ್ಕಳ ರಸ್ತೆ ಸಂಚಾರ ಬಲು ಕಷ್ಟ

0

ಐವತ್ತೊಕ್ಲು ಗ್ರಾಮದ ಪೊಳೆಂಜ -ಕರಿಕ್ಕಳ ರಸ್ತೆಯಲ್ಲಿ ಪಾಂಡಿಗದ್ದೆ ಮತ್ತು ಕಂಬಳ ಸಮೀಪ ರಸ್ತೆ ಜಾರು ಬಂಡಿಯಂತಾಗಿದೆ. ವಾಹನ ಸಂಚಾರಕ್ಕೆ ಬಹಳಷ್ಟು ಕಷ್ಟ ಪಡುತ್ತಿದ್ದು, ರಸ್ತೆಯ ಕೆಸರಿನಿಂದ ಜೀಪೊಂದು ಚರಂಡಿಗೆ ಜಾರಿದ್ದು ಕ್ರೇನ್ ಮೂಲಕ ತೆಗೆದ ಘಟನೆಯೂ ನಡೆದಿದೆ.

ನಿತ್ಯ ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಸಂಚಾರಿಸುತ್ತಿದ್ದು ನಡೆದು ಹೋಗಲು ಕಷ್ಟವಾಗುತ್ತದೆ ಎಂದು ಜನರು ದೂರಿದ್ದಾರೆ.ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.