ದೀಕ್ಷಾ ಎಲಿಮಲೆ ಯೋಗಾಸನದಲ್ಲಿ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್

0


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿನ 7 ನೇ ತರಗತಿ ವಿದ್ಯಾರ್ಥಿನಿ ಕು. ದೀಕ್ಷಾ ಪಕ್ಷ್ಯಾಸನ ಮಾಡುವುದರ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರುಗಳಿಸಿದ್ದಾಳೆ. ಇವಳು ಪಕ್ಷ್ಯಾಸನದಲ್ಲಿ 17 ನಿಮಿಷ 27 ಸೆಕೆಂಡುಗಳ ಕಾಲ ಒಂದೇ ಸ್ಥಿತಿಯಲ್ಲಿ ನಿಂತು ಈ ಸಾಧನೆ ಮಾಡಿದ್ದಾಳೆ. ಇವಳು ಕಳೆದ ವರ್ಷ ಭೂ ನಮನಾಸನವನ್ನು ಮಾಡುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಳು.
ಇವಳು ಎಲಿಮಲೆ ಸಿದ್ದಲಿಂಗ ಮತ್ತು ಕೋಮಲಾಂಗಿ ದಂಪತಿಗಳ ಪುತ್ರಿ.