ಅಧ್ಯಕ್ಷರಾಗಿ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಯಾಗಿ ಆದಂ ಹಾಜಿ ಪುನರಾಯ್ಕೆ
ಅನ್ಸಾರಿಯ ಎಜುಕೇಶನ್ ಸೆಂಟರ್ ಅನಾಥ ಮತ್ತು ಮಕ್ಕಳ ಕೇಂದ್ರ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅನ್ಸಾರಿಯ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಮಜೀದ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ ಪುನಾರಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ ಖಾದರ್ ಪಟೇಲ್, ಎಸ್ ಪಿ ಅಬೂಭಕ್ಕರ್, ಕಾರ್ಯದರ್ಶಿಗಳಾಗಿ ಶರೀಫ್ ಸುದ್ದಿ,ಅಬ್ದುಲ್ ಕಲಾಂ ಬೀಜಕೊಚ್ಚಿ, ಕಮಾಲ್ ಮಾಂಬ್ಳಿ,ಅನ್ಸಾರಿಯ ಗಲ್ಫ್ ಸಮಿತಿಗಳ ಸಂಯೋಜಕರಾಗಿ ಹಾಜಿ ಅಬ್ದುಲ್ ಹಮೀದ್ ಎಸ್ ಎಂ, ನಿರ್ದೇಶಕರಾಗಿ ಹಸನ್ ಹಾಜಿ ಏ ಆರ್ ಟ್ರೇಡರ್ಸ್, ಶಾಫಿ ಕುತ್ತಮೊಟ್ಟೆ, ಅಬ್ದುಲ್ ಹಮೀದ್ ಬೀಜಕೊಚ್ಚಿ,ಉಮ್ಮರ್ ಕೆ ಎಸ್,ಶರೀಫ್ ಕಂಠಿ,ಹಾಜಿ ಅಬ್ದುಲ್ ಹಮೀದ್ ಜನತಾ, ಕೆ ಬಿ ಇಬ್ರಾಹಿಂ, ಸಿದ್ದೀಕ್ ಕಟ್ಟೆಕ್ಕಾರ್, ಸಿದ್ದೀಕ್ ಕೊಕ್ಕೊ, ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ಹಾಜಿ ಅಬ್ದುಲ್ ಕಲಾಂ ಕಟ್ಟೆಕ್ಕಾರ್, ಅಬ್ದುಲ್ ಖಾದರ್(ಉಂಬು),ಮುಸ್ತಫಾ ಬೀಜಕೊಚ್ಚಿ,ಉಮ್ಮರ್ ಕೊಲ್ಚಾರ್, ಇವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಅನ್ಸಾರಿಯ ಜುಮ್ಮಾ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ, ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ,ಗಾಂಧಿನಗರ ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್,ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಬಾಬ ಹಾಜಿ ಎಲಿಮಲೆ,ಹಾಜಿ ಅಬ್ದುಲ್ ಖಾದರ್ ಕಲ್ಲಪಳ್ಳಿ ಯವರನ್ನು ಆಯ್ಕೆ ಮಾಡಲಾಯಿತು.