














ಬಳ್ಪ ಗ್ರಾಮದ ಅಲ್ಕಬೆಯ ದಿ. ಪ್ರವೀಣ್ ಅಲ್ಕಬೆಯವರ ಹಿರಿಯ ಪುತ್ರಿ ಕು. ಸ್ಪೂರ್ತಿ ಅಸೌಖ್ಯದಿಂದ ಡಿ. 6 ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಳಾದಳು. ಇವಳಿಗೆ 15 ವರ್ಷ ವಯಸ್ಸಾಗಿತ್ತು.
ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕು. ಸ್ಪೂರ್ತಿ ಕಳೆದ ಮಾರ್ಚ್ ನಿಂದ ಅಸೌಖ್ಯಕ್ಕೆ ಒಳಗಾಗಿದ್ದಳು. ಬಳಿಕ ಬೆಂಗಳೂರಿನ ನಾರಾಯಣ ಆಸ್ಪತ್ರೆ ಸೇರಿದಂತೆ ಹಲವು ಕಡೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ. ಮೃತಳು ತಾಯಿ ಶ್ರೀಮತಿ ಪುಷ್ಪ ಪ್ರವೀಣ್, ಸಹೋದರಿ ಕು. ಧೃತಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾಳೆ.










